Sunday, June 13, 2021
Homeದೆಹಲಿಭಾರತೀಯ ನೌಕಾಪಡೆಗೆ 38 ಬ್ರಹ್ಮೋಸ್ ಸೂಪರ್ಸಾನಿಕ್ ಕ್ಷಿಪಣಿ ಸದ್ಯದಲ್ಲೇ ಸೇರ್ಪಡೆ

ಇದೀಗ ಬಂದ ಸುದ್ದಿ

ಭಾರತೀಯ ನೌಕಾಪಡೆಗೆ 38 ಬ್ರಹ್ಮೋಸ್ ಸೂಪರ್ಸಾನಿಕ್ ಕ್ಷಿಪಣಿ ಸದ್ಯದಲ್ಲೇ ಸೇರ್ಪಡೆ

 ನವದೆಹಲಿ: ಭಾರತೀಯ ನೌಕಾಪಡೆ ಇದೀಗ ಮತ್ತಷ್ಟು ಶಕ್ತಿಶಾಲಿಯಾಗಿದ್ದು, ಶತ್ರು ರಾಷ್ಟ್ರಗಳ ಎದೆಯಲ್ಲಿ ನಡುಕ ಹುಟ್ಟಿಸಿದೆ. ನೌಕಾಪಡೆ ಇದೀಗ 38 ಬ್ರಹ್ಮೋಸ್ ಸೂಪರ್ಸಾನಿಕ್ ಕ್ರೂಸ್ ಕ್ಷಿಪಣಿಗಳನ್ನು ಪಡೆದುಕೊಳ್ಳುವ ಪ್ರಸ್ತಾಪ ಮುಂದಿಟ್ಟಿದೆ.

ಮುಂದಿನ ದಿನಗಳಲ್ಲಿ ಸಕ್ರಿಯ ಸೇವೆಗೆ ಸೇರಲಿರುವ ಭಾರತೀಯ ನೌಕಾಪಡೆಯ ನಿರ್ಮಾಣ ಹಂತದಲ್ಲಿರುವ ವಿಶಾಖಪಟ್ಟಣಂನ ಯುದ್ಧನೌಕೆಗಳಲ್ಲಿ ಈ ಕ್ಷಿಪಣಿಗಳನ್ನು ಅಳವಡಿಸಲಾಗುವುದು.

38 ವಿಸ್ತೃತ ಶ್ರೇಣಿಯ ಬ್ರಹ್ಮೋಸ್ ಸೂಪರ್​ಸಾನಿಕ್ ಕ್ರೂಸ್ ಕ್ಷಿಪಣಿ ಸ್ವಾಧೀನಪಡಿಸಿಕೊಳ್ಳಲು 1,800 ಕೋಟಿ ರೂ. ಪ್ರಸ್ತಾಪವು ರಕ್ಷಣಾ ಸಚಿವಾಲಯದ ಬಳಿ ಇದೆ. ಶೀಘ್ರದಲ್ಲೇ ಅನುಮೋದನೆ ಪಡೆಯುವ ನಿರೀಕ್ಷೆಯಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ. ಸುಮಾರು 450 ಕಿ.ಮೀ. ವೇಗದಲ್ಲಿ ನಿಖರವಾಗಿ ಗುರಿ ತಲುಪಿ ವೈರಿ ಪಡೆಯನ್ನು ಧ್ವಂಸಗೊಳಿಸುವ ಸಾಮರ್ಥ್ಯವನ್ನ ಬ್ರಹ್ಮೋಸ್​ ಹೊಂದಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img