Wednesday, January 20, 2021
Home ಸುದ್ದಿ ಜಾಲ ಕಲಬುರಗಿಯಿಂದ ತಿರುಪತಿಗೆ ವಿಮಾನ; ವೇಳಾಪಟ್ಟಿ

ಇದೀಗ ಬಂದ ಸುದ್ದಿ

ಕಲಬುರಗಿಯಿಂದ ತಿರುಪತಿಗೆ ವಿಮಾನ; ವೇಳಾಪಟ್ಟಿ

ಹುಬ್ಬಳ್ಳಿ, ಡಿ.15: ಸ್ಟಾರ್ ಏರ್ ಸಂಸ್ಥೆ ಜನವರಿಯಿಂದ ಹುಬ್ಬಳ್ಳಿ, ಕಲಬುರಗಿ ಯಿಂದ ತಿರುಪತಿಗೆ ವಿಮಾನ ಸೇವೆಯನ್ನು ಆರಂಭಿಸಲಿದೆ. ಈ ವಿಮಾನಕ್ಕಾಗಿ ಮುಂಗಡ ಟಿಕೆಟ್ ಬುಕ್ಕಿಂಗ್ ಆರಂಭಿಸಲಾಗಿದೆ.

ಜನವರಿ 11ರಿಂದ ಸ್ಟಾರ್ ಏರ್ ವಿಮಾನಗಳು ಕಲಬುರಗಿ-ತಿರುಪತಿ, ತಿರುಪತಿ-ಹುಬ್ಬಳ್ಳಿ ನಡುವೆ ಸಂಚಾರ ನಡೆಸಲಿವೆ. ವಿಮಾನ ಹಾರಾಟದ ವೇಳಾಪಟ್ಟಿಯನ್ನು ವಿಮಾನಯಾನ ಸಂಸ್ಥೆ ಬಿಡುಗಡೆ ಮಾಡಿದೆ.

1999 ರೂ.ಗಳಲ್ಲಿ ಜನರು ವಿಮಾನದಲ್ಲಿ ಹೋಗಿ ತಿರುಪತಿಯಲ್ಲಿ ದೇವರ ದರ್ಶನವನ್ನು ಮಾಡಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಸ್ಟಾರ್ ಏರ್ ಸಂಸ್ಥೆಯ ವೆಬ್ ಸೈಟ್‌ಗೆ ಭೇಟಿ ನೀಡಬಹುದು.

ವೇಳಾಪಟ್ಟಿ ಕಲಬುರಗಿ-ತಿರುಪತಿ ವಿಮಾನ ಬೆಳಗ್ಗೆ 9.55ಕ್ಕೆ ಹೊರಡಲಿದ್ದು, 11 ಗಂಟೆಗೆ ತಿರುಪತಿ ತಲುಪಲಿದೆ. ಸೋಮವಾರ, ಗುರುವಾರ, ಶುಕ್ರವಾರ, ಭಾನುವಾರ ವಿಮಾನ ಹಾರಾಟ ನಡೆಸಲಿದೆ.

ತಿರುಪತಿ-ಹುಬ್ಬಳ್ಳಿ ವಿಮಾನ ಬೆಳಗ್ಗೆ 11.25ಕ್ಕೆ ಹೊರಡಲಿದ್ದು, 12.30ಕ್ಕೆ ತಿರುಪತಿಗೆ ತಲುಪಲಿದೆ. ಸೋಮವಾರ, ಗುರುವಾರ, ಶುಕ್ರವಾರ ಮತ್ತು ಭಾನುವಾರ ಸಂಚಾರ ನಡೆಸಲಿದೆ.

ಹುಬ್ಬಳ್ಳಿ-ತಿರುಪತಿ ನಡುವಿನ ವಿಮಾನ 12.55ಕ್ಕೆ ಹೊರಡಲಿದ್ದು, 14:00 ಗಂಟೆಗೆ ತಲುಪಲಿದೆ. ಸೋಮವಾರ, ಗುರುವಾರ, ಶುಕ್ರವಾರ ಮತ್ತು ಭಾನುವಾರ ಸಂಚರಿಸಲಿದೆ.

ತಿರುಪತಿ-ಕಲಬುರಗಿ ನಡುವಿನ ವಿಮಾನ 14:25ಕ್ಕೆ ಹೊರಡಲಿದ್ದು, 15:30ಕ್ಕೆ ತಲುಪಲಿದೆ. ಸೋಮವಾರ, ಗುರುವಾರ, ಶುಕ್ರವಾರ ಮತ್ತು ಭಾನುವಾರ ಈ ವಿಮಾನ ಸಂಚಾರ ನಡೆಸಲಿದೆ ಎಂದು ಪ್ರಕಟಣೆ ಹೇಳಿದೆ.

TRENDING