Wednesday, January 27, 2021
Home ಸುದ್ದಿ ಜಾಲ ಕಾಬೂಲ್‌ನಲ್ಲಿ ಬಾಂಬ್‌ ಸ್ಫೋಟ; ಡೆಪ್ಯೂಟಿ ಗವರ್ನರ್‌ ಸಾವು

ಇದೀಗ ಬಂದ ಸುದ್ದಿ

ಕಾಬೂಲ್‌ನಲ್ಲಿ ಬಾಂಬ್‌ ಸ್ಫೋಟ; ಡೆಪ್ಯೂಟಿ ಗವರ್ನರ್‌ ಸಾವು

ಕಾಬೂಲ್‌: ಅಫ್ಗಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿ ಮಂಗಳವಾರ ನಡೆದ ಬಾಂಬ್‌ ದಾಳಿಯಲ್ಲಿ ಡೆಪ್ಯೂಟಿ ಗವರ್ನರ್‌ ಸಾವಿಗೀಡಾಗಿದ್ದಾರೆ. ಅವರು ಕಾರಿನಲ್ಲಿ ತೆರಳುತ್ತಿದ್ದಾಗ ಬಾಂಬ್‌ ದಾಳಿ ನಡೆದಿದೆ ಎಂದು ಭದ್ರತಾ ಅಧಿಕಾರಿಗಳು ಹೇಳಿದ್ದಾರೆ.

ಭದ್ರತಾ ಸಿಬ್ಬಂದಿಯೊಂದಿಗೆ ತೆರಳುತ್ತಿದ್ದ ಕಾಬೂಲ್‌ನ ಡೆಪ್ಯೂಟಿ ಗವರ್ನರ್‌ ಮಹಬೂಬುಲ್ಲಾ ಮೊಹೇಬಿ ಮೃತಪಟ್ಟಿದ್ದಾರೆ. ಸ್ಫೋಟದಲ್ಲಿ ಇಬ್ಬರು ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ. ಈವರೆಗೂ ಬಾಂಬ್‌ ದಾಳಿಯ ಹೊಣೆಯನ್ನು ಯಾವುದೇ ಸಂಘಟನೆ ಹೊತ್ತಿಲ್ಲ.

ಮೊಹೇಬಿ ಅವರ ಕಾರಿಗೆ ಮ್ಯಾಗ್ನೆಟಿಕ್‌ ಬಾಂಬ್‌ (ಸ್ಟಿಕಿ ಬಾಂಬ್‌) ಅಂಟಿಸಲಾಗಿತ್ತು ಎಂದು ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ. ಮಂಗಳವಾರ ಘೋರ್‌ ಪ್ರಾಂತ್ಯದಲ್ಲಿ ಇಂಥದ್ದೇ ದಾಳಿ ನಡೆದು ಒಬ್ಬ ಕೌನ್ಸಿಲ್‌ ಸದಸ್ಯ ಮೃತಪಟ್ಟಿದ್ದಾರೆ.

ತಾಲಿಬಾನಿಗಳು ಮತ್ತು ಸರ್ಕಾರದ ನಡುವೆ ಶಾಂತಿಯುತ ಮಾತುಕತೆ ನಡೆಯುತ್ತಿದ್ದರೂ ಅಫ್ಗಾನಿಸ್ತಾನದಲ್ಲಿ ಹಿಂಸಾಚಾರ ಕಡಿಮೆಯಾಗಿಲ್ಲ. ಕಳೆದ ವಾರ ಸರ್ಕಾರಿ ಪ್ರಾಸಿಕ್ಯೂಟರ್‌ ಒಬ್ಬರು ಕರ್ತವ್ಯಕ್ಕೆ ತೆರಳುತ್ತಿದ್ದಾಗ ಗುಂಡು ಹಾರಿಸಿ ಹತ್ಯೆ ಮಾಡಲಾಗಿತ್ತು.

TRENDING