ಹಾವೇರಿ ಜಿಲ್ಲಾ ಕಾರಾಗೃಹದಲ್ಲಿ ನಡೆದ ಘಟನೆ.
ಪುಂಡಲೀಕ ಪವಾರ 26 ವರ್ಷ ಎಂಬಾತನ ಮೇಲೆ ಹಲ್ಲೆ ನಡೆಸಿರೋ ಜೈಲು ಅಧೀಕ್ಷಕ ಟಿ.ಬಿ.ಭಜಂತ್ರಿ.
ತಮ್ಮ ಕಚೇರಿಗೆ ಕರೆಸಿಕೊಂಡು ಅವಾಚ್ಯ ಪದಗಳಿಂದ ಬೈದು ಹಲ್ಲೆ ನಡೆಸಿರೋ ಜೈಲು ಅಧೀಕ್ಷಕ.
ಜೈಲಿನಲ್ಲಿ ನಡೆಯೋ ವಿದ್ಯಮಾನಗಳನ್ನ ಮೇಲಧಿಕಾರಿಗಳಿಗೆ ಹೇಳುತ್ತೀಯಾ ಅಂತಾ ಕಚೇರಿಗೆ ಕರೆದು ಮುಖ ಮತ್ತು ಮೂಗಿಗೆ ಹಲ್ಲೆ.
ವಿಚಾರಣಾಧೀನ ಖೈದಿಯನ್ನು ಕರೆದು ಕೊಲೆ ಮಾಡು, ಬಂದಿದ್ದು ನೋಡಿಕೊಳ್ಳುತ್ತೇನೆ ಅಂತಾ ಬೆದರಿಕೆ ಹಾಕಿರೋ ಆರೋಪ.
ಜೈಲು ಅಧೀಕ್ಷಕ ಭಜಂತ್ರಿ ಹಾಗೂ ಜೈಲಿನ ವಿಚಾರಣಾಧೀನ ಖೈದಿ ವಿನಾಯಕ ವಿರುದ್ಧ ಜೈಲು ವೀಕ್ಷಕ ಪವಾರ ಆರೋಪ.
ಹಾವೇರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಜೈಲು ಅಧೀಕ್ಷಕ ಸೇರಿದಂತೆ ಇಬ್ಬರ ವಿರುದ್ಧ ದೂರು ದಾಖಲು.