Sunday, January 24, 2021
Home ಜಿಲ್ಲೆ ಕಲಬುರ್ಗಿ ನವೀಕರಿಸಬಹುದಾದ ಇಂಧನ ಪ್ರಾದೇಶಿಕ ಕಚೇರಿ ಕಲಬುರಗಿ ಯಲ್ಲೇ ಉಳಿಸುವಂತೆ ಆಗ್ರಹಿಸಿ ಸರ್ಕಾರಕ್ಕೆ ಶಾಸಕ 'ಪ್ರಿಯಾಂಕ್ ಖರ್ಗೆ'...

ಇದೀಗ ಬಂದ ಸುದ್ದಿ

ನವೀಕರಿಸಬಹುದಾದ ಇಂಧನ ಪ್ರಾದೇಶಿಕ ಕಚೇರಿ ಕಲಬುರಗಿ ಯಲ್ಲೇ ಉಳಿಸುವಂತೆ ಆಗ್ರಹಿಸಿ ಸರ್ಕಾರಕ್ಕೆ ಶಾಸಕ ‘ಪ್ರಿಯಾಂಕ್ ಖರ್ಗೆ’ ಪತ್ರ

ಕಲಬುರಗಿ : ನವೀಕರಿಸಬಹುದಾದ ಇಂಧನ ಅಭಿವೃದ್ದಿ ಪ್ರಾದೇಶಿಕ ಕಚೇರಿಯನ್ನು ಕಲಬುರಗಿ ಯಲ್ಲೇ ಉಳಿಸುವಂತೆ ಆಗ್ರಹಿಸಿ ಸಿಎಂ ಅವರಿಗೆ ಕೆಪಿಸಿಸಿ ವಕ್ತಾರರು ಹಾಗೂ ಶಾಸಕರಾದ ಶ್ರೀ ಪ್ರಿಯಾಂಕ್ ಖರ್ಗೆ ಪತ್ರ ಬರೆದು ಆಗ್ರಹಿಸಿದ್ದಾರೆ.

ಕಲ್ಯಾಣ ಕರ್ನಾಟಕದ ಪ್ರಮಖ ಕೇಂದ್ರವಾದ ಕಲಬುರಗಿ ಯಲ್ಲಿ ನವೀಕರಿಸಬಹುದಾದ ಇಂಧನ ಅಭಿವೃದ್ದಿ ಪ್ರಾದೇಶಿಕ ಕಚೇರಿ ಮಂಜೂರಾಗಿ ಉದ್ಘಾಟನೆಗೊಂಡಿತ್ತು. ಆದರೆ, ಸಧ್ಯದ ಮಾಹಿತಿ ಹಾಗೂ ಪತ್ರಿಕಾ ವರದಿ ಪ್ರಕಾರ ಪ್ರಾದೇಶಿಕ ಕಚೇರಿಯನ್ನು ಕಲಬುರಗಿಯಿಂದ ಬೇರೆಡೆ ಸ್ಥಳಾಂತರಿಸುವ ಮಾಹಿತಿ ಇದೆ. ಹಾಗಾಗಿ, ಈ ಕೂಡಲೇ ಸಿಎಂ ಯಡಿಯೂರಪ್ಪನವರು ಸದರಿ ಕಚೇರಿಯನ್ನು ಕಲಬುರಗಿ ಯಲ್ಲೇ ಉಳಿಸಬೇಕು ಎಂದು ಶಾಸಕರು ಅವರು ಬರೆದ ಪತ್ರದಲ್ಲಿ ಆಗ್ರಹಿಸಿದ್ದಾರೆ.

TRENDING