Sunday, June 13, 2021
Homeಸುದ್ದಿ ಜಾಲವೀರಾಂಜನೇಯ ಸ್ವಾಮಿ ದೇವಾಲಯಕ್ಕೆ ಕೋಟಿ ರೂ. ಮೌಲ್ಯದ ಜಾಗ ಬಿಟ್ಟುಕೊಟ್ಟ ಮುಸ್ಲಿಂ ಉದ್ಯಮಿ

ಇದೀಗ ಬಂದ ಸುದ್ದಿ

ವೀರಾಂಜನೇಯ ಸ್ವಾಮಿ ದೇವಾಲಯಕ್ಕೆ ಕೋಟಿ ರೂ. ಮೌಲ್ಯದ ಜಾಗ ಬಿಟ್ಟುಕೊಟ್ಟ ಮುಸ್ಲಿಂ ಉದ್ಯಮಿ

 ಭಕ್ತರು ತಮ್ಮ ನೆಚ್ಚಿನ ದೇವತೆಗೆ ಪ್ರಾರ್ಥನೆ ಸಲ್ಲಿಸಲು ಕಷ್ಟಪಡುತ್ತಿರುವುದನ್ನು ನೋಡಿದ ಮುಸ್ಲಿಂ ಉದ್ಯಮಿಯೊಬ್ಬರು ಬೆಂಗಳೂರು ಹೊರವಲಯದಲ್ಲಿರುವ ಹೊಸಕೋಟೆ ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನಕ್ಕೆ ಸುಮಾರು 1 ಕೋಟಿ ಮೌಲ್ಯದ 1650 ಚದರ ಅಡಿ ಜಾಗವನ್ನ ದಾನ ಮಾಡಿದ್ದಾರೆ.

ಈ ದೇವಾಲಯವು ಬೆಂಗಳೂರಿನಿಂದ 40 ಕಿಲೋಮೀಟರ್​ ದೂರದಲ್ಲಿದೆ. ವೈಟ್​ಫೀಲ್ಡ್​​ನಲ್ಲಿ ಸದ್ಯ ಐಟಿ ಕಂಪನಿಗಳು ಹೆಚ್ಚಾಗಿ ತಲೆಯೆತ್ತುತ್ತಿದೆ. ಹೀಗಾಗಿ ಹೊಸಕೋಟೆ ಧೂಳಿನ ಪಟ್ಟಣವಾಗಿ ಮಾರ್ಪಾಡಾಗಿದೆ.

ವಾಲಗೇರಪುರದ ಶ್ರೀ ವೀರಾಂಜನೇಯಸ್ವಾಮಿ ದೇವಾಲಯ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಜಾಗ ಬಿಟ್ಟುಕೊಡಬೇಕು ಎಂದು ಸರ್ಕಾರ ಆದೇಶ ಮಾಡಿತ್ತು.

ಹೀಗಾಗಿ ದೇಗುಲದ ಟ್ರಸ್ಟ್​ ಸುಮಾರು ಮೂರು ದಶಕಗಳ ಹಿಂದೆ ನಿರ್ಮಾಣವಾದ ದೇಗುಲದ ಹಿಂಭಾಗದಲ್ಲಿರುವ ಮೂರು ಎಕರೆ ಜಾಗವನ್ನ ಬಿಟ್ಟುಕೊಟ್ಟಿತ್ತು. ಹೀಗಾಗಿ ಇಕ್ಕಟ್ಟಿನಲ್ಲಿ ಸಿಲುಕಿದ್ದ ಈ ದೇವಾಲಯಕ್ಕೆ ಬಾಷಾ ತಮ್ಮ ಜಾಗವನ್ನ ಬಿಟ್ಟುಕೊಡುವ ಮೂಲಕ ಹಿಂದೂ – ಮುಸ್ಲಿಂ ಸೌಹಾರ್ದತೆಯನ್ನು ಮೆರೆದಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img