Sunday, June 13, 2021
Homeಅಂತರ್ ರಾಜ್ಯಸಾಕಿದ್ದ ನಾಯಿಗೆ ಊಟ ಹಾಕಿಲ್ಲ ಎಂದು ಸಹೋದರಿಯನ್ನೇ ಗುಂಡಿಕ್ಕಿ ಹತ್ಯೆ ಮಾಡಿದ ಸಹೋದರ!

ಇದೀಗ ಬಂದ ಸುದ್ದಿ

ಸಾಕಿದ್ದ ನಾಯಿಗೆ ಊಟ ಹಾಕಿಲ್ಲ ಎಂದು ಸಹೋದರಿಯನ್ನೇ ಗುಂಡಿಕ್ಕಿ ಹತ್ಯೆ ಮಾಡಿದ ಸಹೋದರ!

 ಮೀರತ್: ತಾನು ಸಾಕಿದ್ದ ನಾಯಿಗಳಿಗೆ ರೋಟಿಗಳನ್ನು ಮಾಡಿ ಹಾಕಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕಾಗಿ ವ್ಯಕ್ತಿಯೋರ್ವ ತನ್ನ ಸಹೋದರಿಯನ್ನೇ ಹತ್ಯೆ ಮಾಡಿರುವ ಘಟನೆ ಉತ್ತರ ಪ್ರದೇಶದ ಮೀರತ್ ನಲ್ಲಿ ವರದಿಯಾಗಿದೆ.

ಸಹೋದರಿಯನ್ನು ಹತ್ಯೆ ಮಾಡಿದ ಬಳಿಕ ಪೊಲೀಸರಿಗೆ ಆರೋಪಿ ಆಶೀಶ್ ಶರಣಾಗಿದ್ದಾನೆ. ಪ್ರಾಣಿ ಪ್ರೇಮಿಯಾಗಿರುವ ಆಶೀಶ್, ಹಲವು ನಾಯಿಗಳನ್ನು ಸಾಕಿಕೊಂಡಿದ್ದ. ಈ ನಾಯಿಗಳಿಗೆ ಊಟ ಹಾಕಲಿಲ್ಲವೆಂದು ಕೋಪಗೊಂಡು 20 ವರ್ಷದ ಸಹೋದರಿಯನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ.

ಆಶೀಶ್ ರಿಯಲ್ ಎಸ್ಟೇಟ್ ಡೀಲರ್ ಆಗಿದ್ದು, ಪಿಸ್ತೂಲ್ ನಿಂದ ಪಾರೂಲ್ ನ ತಲೆ ಮತ್ತು ಎದೆಗೆ ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ. ಪಾರೂಲ್ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಗುಂಡಿನ ಶಬ್ದ ಕೇಳುತ್ತಿದ್ದಂತೆಯೇ ಕುಟುಂಬ ಸದಸ್ಯರು ಬಂದಿದ್ದಾರೆ. ಅಷ್ಟರಲ್ಲಿ ಪಾರೂಲ್ ರಕ್ತದ ಮಡುವಿನಲ್ಲಿ ಬಿದ್ದಿದ್ದಳು. ಸ್ವತಃ ಆಶೀಶ್ ಪೊಲೀಸರಿಗೆ ಕರೆ ಮಾಡಿ ತಿಳಿಸಿದ್ದು, ಪೊಲೀಸರು ಆತನನ್ನು ಬಂಧಿಸಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img