Saturday, January 23, 2021
Home ದೆಹಲಿ ಏಳೆಂಟು ತಿಂಗಳಿನಿಂದ ಕೋವಿಡ್‌ ಕರ್ತದ್ಯದಲ್ಲಿರುವ ವೈದ್ಯರಿಗೆ ಸ್ವಲ್ಪ ವಿರಾಮ ನೀಡಿ : ಸುಪ್ರೀಂ

ಇದೀಗ ಬಂದ ಸುದ್ದಿ

ಏಳೆಂಟು ತಿಂಗಳಿನಿಂದ ಕೋವಿಡ್‌ ಕರ್ತದ್ಯದಲ್ಲಿರುವ ವೈದ್ಯರಿಗೆ ಸ್ವಲ್ಪ ವಿರಾಮ ನೀಡಿ : ಸುಪ್ರೀಂ

ನವದೆಹಲಿ: ಏಳೆಂಟು ತಿಂಗಳಿನಿಂದ ಕೋವಿಡ್‌ ಕರ್ತವ್ಯದಲ್ಲಿ ತೊಡಗಿರುವ ವೈದ್ಯರಿಗೆ ವಿರಾಮ ನೀಡುವ ಬಗ್ಗೆ ಚಿಂತನೆ ನಡೆಸಿ ಎಂದು ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್‌ ಸೂಚಿಸಿದೆ.

ನಿರಂತರ ಕೆಲಸವು ವೈದ್ಯರ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು ಎಂದು ನ್ಯಾಯಾಲಯ ಹೇಳಿದೆ.

ಕೋವಿಡ್‌ ರೋಗಿಗಳಿಗೆ ಸರಿಯಾದ ಚಿಕಿತ್ಸೆ ಮತ್ತು ಆಸ್ಪತ್ರೆಗಳಲ್ಲಿ ಮೃತ ದೇಹಗಳನ್ನು ಗೌರವಯುತವಾಗಿ ನಿರ್ವಹಿಸುವ ಕುರಿತಾಗಿ ಸ್ವಯಂ ‍‍‍ಪ್ರೇರಿತ ದೂರು ದಾಖಲಿಸಿಕೊಂಡಿರುವ ಸುಪ್ರೀಂಕೋರ್ಟ್‌ ಈ ಕುರಿತು ವಿಚಾರಣೆ ನಡೆಸಿತು. ನ್ಯಾಯಮೂರ್ತಿಗಳಾದ ಅಶೋಕ್‌ ಭೂಷಣ್‌, ಆರ್‌.ಎಸ್‌ ರೆಡ್ಡಿ, ಎಂ.ಆರ್‌. ಶಾ ಅವರನ್ನು ಒಳಗೊಂಡ ‍ಪೀಠವು ಕೋವಿಡ್ ಕರ್ತವ್ಯದಲ್ಲಿ ತೊಡಗಿರುವ ವೈದ್ಯರಿಗೆ ವಿರಾಮ ನೀಡುವ ಸಲಹೆಯನ್ನು ಪರಿಗಣಿಸುವಂತೆ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರಿಗೆ ಸೂಚಿಸಿದೆ.

ನ್ಯಾಯಾಲಯದ ಈ ಸಲಹೆಯನ್ನು ಸರ್ಕಾರ ಖಂಡಿತವಾಗಿಯೂ ಪರಿಗಣಿಸಲಿದೆ ಎಂದು ತುಷಾರ್‌ ಮೆಹ್ತಾ ಅವರು ನ್ಯಾಯಪೀಠಕ್ಕೆ ತಿಳಿಸಿದರು.

TRENDING