Sunday, June 13, 2021
Homeಸುದ್ದಿ ಜಾಲ`SBI' ಯಿಂದ ಹಿರಿಯ ನಾಗರಿಕರಿಗೆ ಗುಡ್ ನ್ಯೂಸ್

ಇದೀಗ ಬಂದ ಸುದ್ದಿ

`SBI’ ಯಿಂದ ಹಿರಿಯ ನಾಗರಿಕರಿಗೆ ಗುಡ್ ನ್ಯೂಸ್

ನವದೆಹಲಿ : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ ಬಿಐ) ಹಿರಿಯ ನಾಗರಿಕರಿಗೆ (ಎಸ್ ಬಿಐ ವೆಕೇರ್) ವಿಶೇಷ ನಿಶ್ಚಿತ ಠೇವಣಿ ಯೋಜನೆಯನ್ನು 2021ರ ಮಾರ್ಚ್ 31ರವರೆಗೆ ವಿಸ್ತರಿಸಿದೆ. ಈ ಯೋಜನೆಯನ್ನು ವಿಸ್ತರಿಸಿರುವುದು ಇದು ಎರಡನೇ ಬಾರಿ.

ಮೇ 2020ರಲ್ಲಿ ಎಸ್ ಬಿಐ ಹಿರಿಯ ನಾಗರಿಕರಿಗಾಗಿ ಈ ನಿಶ್ಚಿತ ಠೇವಣಿ ಯೋಜನೆಯನ್ನು ‘ಎಸ್ ಬಿಐ ವೆಕೇರ್’ ಎಂದು ಘೋಷಿಸಿದ್ದು, ಸೆಪ್ಟೆಂಬರ್ ವರೆಗೆ ಈ ಯೋಜನೆಯನ್ನು ಆರಂಭಿಸಿತ್ತು. ಈ ಹಿನ್ನೆಲೆಯಲ್ಲಿ ಹಿರಿಯ ನಾಗರಿಕರಿಗೆ ಹೆಚ್ಚಿನ ಬಡ್ಡಿ ದರ ನೀಡುವ ಉದ್ದೇಶದಿಂದ ಈ ಯೋಜನೆ ಜಾರಿಗೆ ತಂದಿದೆ. ಡಿಸೆಂಬರ್ 31ಕ್ಕೆ ಕೊನೆಗೊಳ್ಳಬೇಕಾಗಿದ್ದ ಈ ಯೋಜನೆಯನ್ನು 2021ರ ಮಾರ್ಚ್ 31ರವರೆಗೆ ವಿಸ್ತರಿಸಲಾಗಿದೆ.

ಎಸ್ ಬಿಐ ವೆಕೇರ್ ರೀಟೈಲ್ ಟರ್ಮ್ ಡೆಪಾಸಿಟ್ ವಿಭಾಗದಲ್ಲಿ ಬಿಡುಗಡೆಮಾಡಿದ್ದು, ಇದರಲ್ಲಿ 30 ಬಿಪಿಎಸ್ ಹೆಚ್ಚುವರಿ ಪ್ರೀಮಿಯಂ ಅನ್ನು ತಮ್ಮ ರೀಟೈಲ್ ಟಿಡಿಯಲ್ಲಿ ಐದು ವರ್ಷಗಳಿಗೆ ಮತ್ತು ಅದಕ್ಕಿಂತ ಹೆಚ್ಚಿನ ಅವಧಿಗೆ ಮಾತ್ರ ಹಿರಿಯ ನಾಗರಿಕರಿಗೆ ನೀಡಬೇಕು.

ಹಿರಿಯ ನಾಗರಿಕರಿಗೆ (ಎಸ್ ಬಿಐ ವೆಕೇರ್ ) ಎಸ್ ಬಿಐನ ನಿಶ್ಚಿತ ಠೇವಣಿ ಯೋಜನೆಯ ಇತ್ತೀಚಿನ ಬಡ್ಡಿ ದರಗಳು ಇಲ್ಲಿವೆ: .

ಸಾಮಾನ್ಯ ಜನರಿಗೆ ಹೋಲಿಸಿದರೆ, ಹಿರಿಯ ನಾಗರಿಕರಿಗಾಗಿ ಎಸ್ ಬಿಐ ವಿಶೇಷ ಎಫ್ ಡಿ ಯೋಜನೆ 80 ಬೇಸಿಸ್ ಪಾಯಿಂಟ್ (ಬಿಪಿಎಸ್) ಬಡ್ಡಿ ದರ ನೀಡಲಿದೆ. ಪ್ರಸ್ತುತ ಎಸ್ ಬಿಐ ಸಾರ್ವಜನಿಕರಿಗೆ 5 ವರ್ಷಗಳ ಎಫ್ ಡಿ ಮೇಲೆ ಶೇ.5.40 ಬಡ್ಡಿ ದರ ಹಾಗೂ ಹಿರಿಯ ನಾಗರಿಕರಿಗೆ ಬ್ಯಾಂಕ್ ವಿಶೇಷ ಎಫ್ ಡಿ ಯೋಜನೆ ‘ಎಸ್ ಬಿಐ ವೆಕೇರ್’ ಅಡಿಯಲ್ಲಿ ಶೇ.6.20ರಷ್ಟು ಬಡ್ಡಿ ನೀಡುತ್ತಿದೆ.

ಒಂದು ವೇಳೆ ಅಂತಹ ಠೇವಣಿಗಳನ್ನು ಅಕಾಲಿಕವಾಗಿ ಹಿಂತೆಗೆದುಕೊಂಡರೆ, ಹಿರಿಯ ನಾಗರಿಕರಿಗಾಗಿ ವಿಶೇಷ ಯೋಜನೆಯಡಿ 30 ಬಿಪಿಎಸ್ ಬಡ್ಡಿಯನ್ನು ಪಾವತಿಸಲಾಗುವುದಿಲ್ಲ. ನೀವು ಈ ಯೋಜನೆಯಲ್ಲಿ ಎಫ್ ಡಿ ಯನ್ನು ಅಕಾಲಿಕವಾಗಿ ಹಿಂತೆಗೆದುಕೊಳ್ಳುವುದನ್ನು ಆಯ್ಕೆ ಮಾಡಿದರೆ, ಸಾಮಾನ್ಯ ಗ್ರಾಹಕರಿಗಿಂತ ನಿಮ್ಮ ನಿಶ್ಚಿತ ಠೇವಣಿ ಹೂಡಿಕೆ ಕೇವಲ 5.9 ಪ್ರತಿಶತ ಅಂದರೆ 50 ಬಿಪಿಎಸ್ ಅನ್ನು ಮಾತ್ರ ಪಡೆಯುತ್ತವೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img