Saturday, January 16, 2021
Home ಅಂತರ್ ರಾಷ್ಟ್ರೀಯ ಹೆತ್ತ ತಾಯಿಯನ್ನೆ118 ಬಾರಿ ಚಾಕು ಇರಿದು ಕೊಂದ ಪಾಪಿ ಮಗ! ಪೊಲೀಸರಿಗೆ ಕರೆ ಮಾಡಿ ಬಾಡಿ...

ಇದೀಗ ಬಂದ ಸುದ್ದಿ

ಹೆತ್ತ ತಾಯಿಯನ್ನೆ118 ಬಾರಿ ಚಾಕು ಇರಿದು ಕೊಂದ ಪಾಪಿ ಮಗ! ಪೊಲೀಸರಿಗೆ ಕರೆ ಮಾಡಿ ಬಾಡಿ ಬ್ಯಾಗ್ ತರಲು ಹೇಳಿದ

ಲಂಡನ್​: ಹೆತ್ತು ಹೊತ್ತು ಸಾಕಿದ್ದ ಅಮ್ಮನನ್ನು, ಮಗನೇ 118 ಬಾರಿ ಚಾಕು ಇರಿದು ಸಾಯಿಸಿರುವ ಘಟನೆ ಇಂಗ್ಲೆಂಡ್​ನ ಹ್ಯಾಂಪ್​ಶೈರ್​ನಲ್ಲಿ ನಡೆದಿದೆ. ಕಳೆದ ವರ್ಷದ ನಡೆದಿದ್ದ ಘಟನೆ ಇದೀಗ ಬೆಳಕಿಗೆ ಬಂದಿದೆ.

17 ವರ್ಷದ ರೋವನ್​ ಥಾಂಪ್ಸನ್ ಹೆಸರಿನ ಬಾಲಕ ತನ್ನ ತಂದೆಯೊಂದಿಗೆ ಬದುಕುತ್ತಿದ್ದ. ತಾಯಿ ಜೊವಾನ್ನಾ ಥಾಂಪ್ಸನ್​ನಿಂದ ಬೇರಾಗಿದ್ದ ಆತ ಆಗಾಗ ತಾಯಿ ಮನೆಗೆ ಬಂದು ಆಕೆಯೊಂದಿಗಿದ್ದು ಹೋಗುತ್ತಿದ್ದ. ಕಳೆದ ವರ್ಷ ಜೂನ್​ನಲ್ಲಿ ಅದೇ ರೀತಿ ಆತ ಅಮ್ಮನ ಮನೆಗೆ ಬಂದಿದ್ದಾನೆ. ರಾತ್ರಿ ಅಮ್ಮನೊಂದಿಗೆ ಯಾವುದೋ ವಿಚಾರಕ್ಕೆ ಜಗಳವಾಡಿದ್ದಾನೆ. ಅದೇ ಸಿಟ್ಟಿನಲ್ಲಿದ್ದ ಬಾಲಕ ಬೆಳಗ್ಗೆ ಅಮ್ಮ ವಾಕಿಂಗ್​ ಮುಗಿಸಿ ಬರುತ್ತಿದ್ದಂತೆ, ಆಕೆಯ ಕುತ್ತಿಗೆ ಒತ್ತಿದ್ದಾನೆ. ಉಸಿರು ನಿಂತ ಮೇಲೆ ಆಕೆಯ ದೇಹವನ್ನು ಕೆಳಗೆ ಮಲಗಿಸಿ, ದೇಹಕ್ಕೆ ಚಾಚುವಿನಿಂದ 118 ಬಾರಿ ಚುಚ್ಚಿದ್ದಾನೆ. ನಂತರ ಪೊಲೀಸರಿಗೆ ಕರೆ ಮಾಡಿ, ಅತ್ಯಂತ ಶಾಂತವಾಗಿ ನಡೆದ ವಿಚಾರವನ್ನು ತಿಳಿಸಿದ್ದಾನೆ. ನಾನು ನನ್ನ ಅಮ್ಮನ ಕೊಲೆ ಮಾಡಿದ್ದೇನೆ, ಬರುವಾಗ ಬಾಡಿ ಬ್ಯಾಗ್​ ತೆಗೆದುಕೊಂಡು ಬನ್ನಿ ಎಂದು ಹೇಳಿದ್ದಾನೆ.

ಸ್ಥಳಕ್ಕೆ ಬಂದ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಯುವಕನನ್ನು ಬಂಧಿಸಿದ್ದಾರೆ. ಆತನಿಗೆ ಮಾನಸಿಕ ಅಸ್ವಸ್ಥತೆ ಇದ್ದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಬಂಧಿತನಾಗಿ ಮೂರೇ ತಿಂಗಳಿನಲ್ಲಿ ಆತ ಮೃತನಾಗಿದ್ದಾನೆ. ಈ ವಾರದಲ್ಲಿ ಈ ಪ್ರಕರಣ ಅಂತಿಮ ವಿಚಾರಣೆ ನಡೆದಿದ್ದು, ಸಂಪೂರ್ಣ ಮಾಹಿತಿಯನ್ನು ಸಾರ್ವಜನಿಕಗೊಳಿಸಲಾಗಿದೆ.

TRENDING