Sunday, June 13, 2021
Homeಸುದ್ದಿ ಜಾಲಐಫೋನ್​ ಕಾರ್ಖಾನೆ ಮೇಲಿನ ದಾಳಿಯಲ್ಲಿ ಸಾವಿರಾರು ಐಫೋನ್​ ಕಳವು!

ಇದೀಗ ಬಂದ ಸುದ್ದಿ

ಐಫೋನ್​ ಕಾರ್ಖಾನೆ ಮೇಲಿನ ದಾಳಿಯಲ್ಲಿ ಸಾವಿರಾರು ಐಫೋನ್​ ಕಳವು!

 ಕೋಲಾರ: ಜಿಲ್ಲೆಯ ನರಸಾಪುರ ಬಳಿಯಿರುವ ಐಫೋನ್​ ಸಾಧನಗಳನ್ನು ಜೋಡಿಸುವ ವಿಸ್ಟ್ರಾನ್​ ಕಾರ್ಖಾನೆಯ ಮೇಲೆ ವೇತನ ವಿಚಾರದಲ್ಲಿ ಕಾರ್ಮಿಕರು ದಾಳಿ ನಡೆಸಿರುವ ವಿಚಾರ ಗೊತ್ತೇ ಇದೆ. ಆದರೆ ಈ ಒಂದೇ ಒಂದು ದಾಳಿಯಿಂದಾಗಿ ಐಫೋನ್​ ಸಂಸ್ಥೆ ಕೋಟ್ಯಂತರ ರೂಪಾಯಿ ನಷ್ಟ ಅನುಭವಿಸಿದೆ.

ದಾಳಿ ನಡೆಸಿದ ನೌಕರರು ಸುಮಾರು 21 ಸಾವಿರ ಐಫೋನ್​ಗಳನ್ನು ಧ್ವಂಸ ಮಾಡಿದ್ದಾರೆ. ಜತೆಯಲ್ಲಿ ದುಬಾರಿ ಬೆಲೆಯ ಸಾವಿರಾರು ಐಫೋನ್​ಗಳನ್ನು ಕದ್ದಿದ್ದಾರೆ. ಕಚೇರಿಯ ಗಾಜು ಸೇರಿ ಅನೇಕ ವಸ್ತುಗಳನ್ನು ಪುಡಿ ಪುಡಿ ಮಾಡಲಾಗಿದೆ. ದಾಳಿಯಿಂದಾಗಿ ಸುಮಾರು 437 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ವಿಸ್ಟ್ರಾನ್​ ಕಂಪನಿ ತಿಳಿಸಿದೆ. ಈ ವಿಚಾರವಾಗಿ ಪೊಲೀಸರು ಮತ್ತು ಕಾರ್ಮಿಕ ಇಲಾಖೆಗೆ ದೂರು ನೀಡಲಾಗಿದೆ.

ಈ ಪ್ರಕರಣದ ಕುತಿತಾಗಿ ಆಯಪಲ್​ ಸಂಸ್ಥೆ ವಿಚಾರಣೆ ಆರಂಭಿಸಿದೆ. ‘ನಾವು ಆಯಪಲ್​ ತಂಡದ ಸದಸ್ಯರು ಮತ್ತು ಲೆಕ್ಕ ಪರಿಶೋಧಕರನ್ನು ಕೋಲಾರಕ್ಕೆ ಕಳುಹಿಸುತ್ತಿದ್ದೇವೆ. ನಮ್ಮ ತಂಡಗಳು ಸ್ಥಳೀಯ ಅಧಿಕಾರಿಗಳೊಂದಿಗೆ ನಿಕಟ ಸಂಪರ್ಕದಲ್ಲಿವೆ ಮತ್ತು ಪ್ರಕರಣದ ತನಿಖೆಗೆ ನಾವು ನಮ್ಮ ಸಂಪೂರ್ಣ ಬೆಂಬಲವನ್ನು ನೀಡುತ್ತಿದ್ದೇವೆ’ ಎಂದು ಆಯಪಲ್​ ಸಂಸ್ಥೆ ತಿಳಿಸಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img