Sunday, January 24, 2021
Home ಸುದ್ದಿ ಜಾಲ 'ಏರ್ ಇಂಡಿಯಾ' ಖರೀದಿಗೆ ಮುಂದಾದ ಟಾಟಾಸ್

ಇದೀಗ ಬಂದ ಸುದ್ದಿ

‘ಏರ್ ಇಂಡಿಯಾ’ ಖರೀದಿಗೆ ಮುಂದಾದ ಟಾಟಾಸ್

ನವದೆಹಲಿ, ಡಿ.14 : ಏರ್ ಇಂಡಿಯಾ ಖರೀದಿ ಆಸಕ್ತಿ ವ್ಯಕ್ತಪಡಿಸಲು ಟಾಟಾ ಸನ್ಸ್ ತನ್ನ ಇಒಐ ಕಳುಹಿಸುವ ನಿರೀಕ್ಷೆಯಿದೆ ಎಂದು ಉದ್ಯಮ ತಜ್ಞರು ಹೇಳಿದ್ದಾರೆ.

ಉದ್ಯಮಿ ಸಂಘಟನೆಯಾದ ಟಾಟಾ ಗ್ರೂಪ್​ನ ಟಾಟಾ ಸನ್ಸ್ ವಿಮಾನಯಾನದಲ್ಲಿ ಸರ್ಕಾರದ ಪಾಲು ಖರೀದಿಸಲು ನೇರವಾಗಿ ಇಒಐ ಕಳುಹಿಸುತ್ತದೆ. ಟಾಟಾ ಸನ್ಸ್ ಇಒಐ ಅನ್ನು ಸಲ್ಲಿಸಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಟಾಟಾ ಗ್ರೂಪ್​ನ ಅಧಿಕೃತ ವಕ್ತಾರರನ್ನು ಸಂಪರ್ಕಿಸಿದಾಗ ಈ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ. ಈ ಹಿಂದಿನ ವಿಮಾನಯಾನ ಸಂಸ್ಥೆಯಲ್ಲಿನ ಷೇರು ಖರೀದಿಸುವ ಆಸಕ್ತಿಯ ಬಗ್ಗೆ ಹಲವು ತಿಂಗಳುಗಳಿಂದ ಊಹಾಪೋಹಗಳು ಹಬ್ಬುತ್ತಿವೆ.

1960ರ ದಶಕದಲ್ಲಿ ವಿಮಾನಯಾನ ರಾಷ್ಟ್ರೀಕರಣಕ್ಕೆ ಮುಂಚಿತವಾಗಿ ಏರ್ ಇಂಡಿಯಾವನ್ನು ಪ್ರಾರಂಭಿಸಿದ್ದು ಟಾಟಾ ಸಂಸ್ಥೆಯಾಗಿದೆ. ಇಒಐ ಸಲ್ಲಿಕೆಗೆ ಇಂದೇ ಕೊನೆಯ ದಿನಾಂಕವಾಗಿದೆ.

ಟಾಟಾಸ್ ಜೊತೆಗೆ, ವಿಮಾನಯಾನ ವಾಣಿಜ್ಯ ನಿರ್ದೇಶಕಿ ಮೀನಾಕ್ಷಿ ಮಲ್ಲಿಕ್ ನೇತೃತ್ವದ ಏರ್ ಇಂಡಿಯಾ ನೌಕರರ ತಂಡ ಸಹ ತಮ್ಮ ಇಒಐಗೆ ಕಳುಹಿಸುವ ನಿರೀಕ್ಷೆಯಿದೆ.

TRENDING