Sunday, June 13, 2021
Homeರಾಜ್ಯಸಾರಿಗೆ ನೌಕರರ ಮುಷ್ಕರ ಸಮಾಪ್ತಿ: ಸಂಜೆಯಿಂದಲೇ ಬಸ್​ ಸಂಚಾರ ಆರಂಭ..!

ಇದೀಗ ಬಂದ ಸುದ್ದಿ

ಸಾರಿಗೆ ನೌಕರರ ಮುಷ್ಕರ ಸಮಾಪ್ತಿ: ಸಂಜೆಯಿಂದಲೇ ಬಸ್​ ಸಂಚಾರ ಆರಂಭ..!

ಬೆಂಗಳೂರು,ಡಿ.14-ಸರ್ಕಾರ ಲಿಖಿತ ಭರವಸೆ ನೀಡಿದರಷ್ಟೇ ಮುಷ್ಕರ ಕೈಬಿಡುವುದಾಗಿ ಮುಷ್ಕರ ನಿರತ ಸಾರಿಗೆ ನೌಕರರು ಹೇಳಿಕೆ ನೀಡಿದ ಬೆನ್ನಲ್ಲೇ ಮುಖ್ಯಮಂತ್ರಿ ಯಡಿಯೂರಪ್ಪ ಕಾವೇರಿಯಲ್ಲಿಂದು ಸಚಿವರೊಂದಿಗೆ ಸಭೆ ನಡೆಸಿದರು. ಬೆಳಗ್ಗೆ ಕಾವೇರಿಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ, ಉಪಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ, ಲಕ್ಷ್ಮಣ್ ಸವದಿ, ಹಿರಿಯ ಸಚಿವರಾದ ಜೆ.ಸಿ.ಮಾಧುಸ್ವಾಮಿ, ಬಸವರಾಜ್ ಬೊಮ್ಮಾಯಿ, ಆರ್.ಅಶೋಕ್, ಶ್ರೀರಾಮುಲು, ಬಿಎಂಟಿಸಿ ಅಧ್ಯಕ್ಷ ನಂದೀಶ್ ರೆಡ್ಡಿ, ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಸೇರಿದಂತೆ ಮತ್ತಿತರರ ಜೊತೆ ಬಿಕ್ಕಟ್ಟು ಕುರಿತು ಚರ್ಚೆ ನಡೆಸಿದರು.

ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಅವರೊಂದಿಗೆ ಮತ್ತೊಂದು ಸುತ್ತಿನ ಮಾತುಕತೆ ನಡೆಸಿ ಯಾವ ಯಾವ ಬೇಡಿಕೆಗಳನ್ನು ಪರಿಗಣಿಸಬಹುದು ಎಂಬುದರ ಬಗ್ಗೆ ಮಾಹಿತಿ ಪಡೆದರು. ಪ್ರತಿಭಟನಾ ನಿರತರು ಲಿಖಿತ ಭರವಸೆಯನ್ನು ಸಚಿವರ ಮೂಲಕ ವೇದಿಕೆಗೆ ಕಳುಹಿಸಿಕೊಡಬೇಕೆಂದು ಪಟ್ಟು ಹಿಡಿದಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರತಿಭಟನಾ ವೇದಿಕೆಗೆ ಬಿಎಂಟಿಸಿ ಅಧ್ಯಕ್ಷ ನಂದೀಶ್ ರೆಡ್ಡಿ ಅವರನ್ನು ಕಳುಹಿಸಿಕೊಡಲು ತೀರ್ಮಾನಿಸಲಾಯಿತು.

ಕೋವಿಡ್ ಹಿನ್ನೆಲೆಯಲ್ಲಿಎಲ್ಲ ನೌಕರರನ್ನು ಸಾರಿಗೆ ನೌಕರರು ಎಂದು ಪರಿಗಣಿಸಿದರೆ ಅರ್ಥಿಕ ಇಲಾಖೆಗೆ ಹೊರೆಯಾಗುತ್ತದೆ. ಅಲ್ಲದೆ ಮುಂದೆ ಬೇರೆ ಬೇರೆ ಇಲಾಖೆಗಳ ನೌಕರರು ಕೂಡ ಇದೇ ರೀತಿ ಬ್ಲಾಕ್‍ಮೇಲ್ ತಂತ್ರ ಅನುಸರಿಸುತ್ತಾರೆ. ಉಳಿದ ಬೇಡಿಕೆಗಳನ್ನು ಕಾಲಮಿತಿಯೊಳಗೆ ಈಡೇರಿಸಬಹುದಾಗಿದೆ. ತಕ್ಷಣವೇ ನೌಕರರ ಸಂಘಟನೆಗಳ ಮುಖಂಡರ ಜೊತೆ ಚರ್ಚಿಸಿ ಸಮಸ್ಯೆಯನ್ನು ಇತ್ಯರ್ಥಪಡಿಸಬೇಕೆಂದು ಸಿಎಂ ಸೂಚನೆ ಕೊಟ್ಟರು.

ಸೂಚನೆ ಮೇರೆಗೆ ಸಾರಿಗೆ ಸಚಿವ ಲಕ್ಷ್ಮಣ್ ಸವದಿ, ಸಂಘಟನೆಗಳ ಮುಖಂಡರ ಜೊತೆ ಮಾತುಕತೆ ನಡೆಸಿ ಕರ್ತವ್ಯಕ್ಕೆ ಹಾಜರಾಗಬೇಕೆಂದು ಮನವಿ ಮಾಡಿಕೊಂಡರು. ಬಿಎಂಟಿಸಿ ಅಧ್ಯಕ್ಷ ನಂದೀಶ್ ರೆಡ್ಡಿ ಅವರು ಪ್ರತಿಭಟನಾನಿರತರ ಬಳಿ ತೆರಳಿ ಲಿಖಿತ ಪತ್ರವನ್ನು ತಲುಪಿಸಿ ಪ್ರತಿಭಟನೆಯನ್ನು ಕೈಬಿಟ್ಟು ಕರ್ತವ್ಯಕ್ಕೆ ಹಾಜರಾಗಬೇಕೆಂದು ಮನವಿ ಮಾಡಿದರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img