Sunday, June 13, 2021
Homeದೆಹಲಿಪತ್ರಕರ್ತ ಸಿದ್ದಿಕಿ ಕಪ್ಪಣ್ ಬಂಧನ ಪ್ರಕರಣ: ಜನವರಿಯಲ್ಲಿ ವಿಚಾರಣೆ

ಇದೀಗ ಬಂದ ಸುದ್ದಿ

ಪತ್ರಕರ್ತ ಸಿದ್ದಿಕಿ ಕಪ್ಪಣ್ ಬಂಧನ ಪ್ರಕರಣ: ಜನವರಿಯಲ್ಲಿ ವಿಚಾರಣೆ

 ನವದೆಹಲಿ: ಹಾಥರಸ್ ಪ್ರಕರಣದ ವರದಿಗಾಗಿ ತೆರಳುತ್ತಿದ್ದ ಪತ್ರಕರ್ತ ಸಿದ್ದಿಕಿ ಕಪ್ಪಣ್ ಅವರ ಬಂಧನವನ್ನು ಪ್ರಶ್ನಿಸಿ ಕೇರಳ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ) ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಜನವರಿ ಮೂರನೇ ವಾರ ವಿಚಾರಣೆ ನಡೆಸಲಿದೆ. ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೊಬಡೆ ನೇತೃತ್ವದ ನ್ಯಾಯಪೀಠ ಸೋಮವಾರ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಸರ್ಕಾರ ಸಲ್ಲಿಸಿದ್ದ ಹೆಚ್ಚುವರಿ ಪ್ರಮಾಣ ಪತ್ರಕ್ಕೆ ಪ್ರತಿಕ್ರಿಯೆ ಸಲ್ಲಿಸಲು ಪತ್ರಕರ್ತರ ಸಂಘಕ್ಕೆ ಅವಕಾಶ ನೀಡಿದೆ. ಹಾಗೆಯೇ ಅರ್ಜಿಯ ವಿಚಾರಣೆಯನ್ನು ಮುಂದೂಡಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img