Sunday, June 13, 2021
Homeಸುದ್ದಿ ಜಾಲನಟಿ ಸಂಜನಾರನ್ನು ಇಸ್ಲಾಂ ಧರ್ಮಕ್ಕೆ ಮತಾಂತರಿಸಲಾಗಿತ್ತು!: ಮೌಲ್ವಿ ವಿರುದ್ಧ ದೂರು ದಾಖಲು

ಇದೀಗ ಬಂದ ಸುದ್ದಿ

ನಟಿ ಸಂಜನಾರನ್ನು ಇಸ್ಲಾಂ ಧರ್ಮಕ್ಕೆ ಮತಾಂತರಿಸಲಾಗಿತ್ತು!: ಮೌಲ್ವಿ ವಿರುದ್ಧ ದೂರು ದಾಖಲು

ಬೆಂಗಳೂರು, ಡಿ.14 : ಡ್ರಗ್ಸ್‌ ಜಾಲ ಪ್ರಕರಣದಲ್ಲಿ ಮೂರು ತಿಂಗಳು ಜೈಲಿನಲ್ಲಿದ್ದು, ಬಳಿಕ ಜಾಮೀನಿನ ಮೇಲೆ ಬಿಡುಗಡೆ ಹೊಂದಿರುವ ನಟಿ ಸಂಜನಾ ಗಲ್ರಾನಿ ಅವರಿಗೀಗ ಮತ್ತೊಂದು ಸಂಕಷ್ಟ ಎದುರಾಗಿದೆ. ನಟಿ ಸಂಜನಾ ಅವರನ್ನು ಬಲವಂತವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರಿಸಲಾಗಿದೆ ಎಂದು ಆರೋಪಿಸಿ ಬೆಂಗಳೂರು ನಗರದ ವಕೀಲರೊಬ್ಬರು ದೂರು ದಾಖಲಿಸಿದ್ದಾರೆ.

ಸ್ಯಾಂಡಲ್ ವುಡ್ ನಟಿ ಸಂಜನಾ ಅವರನ್ನು ಬಲವಂತವಾಗಿ ಹಿಂದೂ ಧರ್ಮದಿಂದ ಇಸ್ಲಾಂ ಗೆ ಮತಾಂತರ ಮಾಡಲಾಗಿದೆ ಎಂದು ಆರೋಪಿಸಿ ಟ್ಯಾನರಿ ರಸ್ತೆಯ ದಾರುಲ್ ಉಲಮ್ ಶಾವಲಿ ಲುಲ್ಲಾ ಎಂಬ ಮೌಲ್ವಿ ವಿರುದ್ಧ ಕಾಟನ್‌ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ವಕೀಲ ಅಮೃತೇಶ್ ಎನ್ನುವವರು ಮೌಲ್ವಿ ವಿರುದ್ಧ ದೂರು ಸಲ್ಲಿಸಿದ್ದಾರೆ.

ದೂರಿನ ಅನುಸಾರ ನಟಿ ಸಂಜನಾ ಅವರನ್ನು 09ನೇ ಅಕ್ಟೋಬರ್ 2018 ರಂದು ಹಿಂದೂ ಧರ್ಮದಿಂದ ಇಸ್ಲಾಂಗೆ ಮತಾಂತರ ಮಾಡಲಾಗಿದೆ. ಅಲ್ಲದೆ, ಅವರಿಗೆ ಮಹಿರಾ ಎಂದು ಮರುನಾಮಕರಣ ಸಹ ಮಾಡಿದ್ದಾರೆ. ಇದಕ್ಕೆ ದಾಖಲೆಯಾಗಿ ಮರುನಾಮಕರಣ ಮಾಡಿದ ಪ್ರಮಾಣಪತ್ರ ಸಹ ನೀಡಲಾಗಿದೆ. ಆದರೆ, ಈ ಮತಾಂತರ ನಟಿಯ ಇಚ್ಚೆಗೆ ವಿರುದ್ಧ, ಬಲವಂತದಿಂದ ನಡೆದಿದೆ ಎಂದು ಎಫ್​​​ಐಆರ್ ದಾಖಲಾಗಿದೆ.

ಈ ಸಂಬಂಧ ಕಾಟನ್‌ಪೇಟೆ ಪೊಲೀಸರು ಕಾನೂನು ಸಲಹೆ ಪಡೆದು ಮುಂದಿನ ಕ್ರಮ ಜರುಗಿಸಲು ತೀರ್ಮಾನಿಸಿದ್ದಾರೆ. ನಟಿ ಸಂಜನಾ ಕಾರ್ಡಿಯಾಲಜಿಸ್ಟ್ ಆಗಿರುವ ಡಾ. ಅಜೀಜ್ ಎನ್ನುವವರೊಂದಿಗೆ ಮದುವೆಯಾಗಿದ್ದರೆಂದು ಹೇಳಲಾಗುವ ಫೋಟೋ ಒಂದು ಕೆಲ ದಿನಗಳ ಹಿಂದೆ ಸಾಮಾಜಿಕ ತಾಣದಲ್ಲಿ ಹರಿದಾಡಿತ್ತು,. ಆ ವೇಳೆ ಸಂಜನಾ ಇಸ್ಲಾಂಗೆ ಮತಾಂತರವಾಗಿ ಹೆಸರು ಬದಲಿಸಿಕೊಂಡಿದ್ದರೆಂಬ ಬಗ್ಗೆ ದಾಖಲೆಗಳು ಸಿಕ್ಕಿವೆ ಎನ್ನಲಾಗಿತ್ತು.

ಈ ನಡುವೆ ಜೈಲಿನಿಂದ ಹೊರಬಂದಿರುವ ಸಂಜನಾ ತಾವು ಯಲಹಂಕ ಬಳಿಯ ರೆಸಾರ್ಟ್ ವೊಂದರಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img