ತಮಿಳು ಚಿತ್ರರಂಗದ ಹೆಸರಾಂತ ನಟಿ ವಿ.ಜೆ. ಚಿತ್ರಾ ಆತ್ಮಹತ್ಯೆಗೆ ಶರಣಾಗಿದ್ದಾರೆ. ಜನಪ್ರಿಯ ಕಾರ್ಯಕ್ರಮವಾದ ಪಾಂಡಿಯನ್ ಸ್ಪೋರ್ಸ್ನಲ್ಲಿ ಮುಲ್ಲೈ ಪಾತ್ರದಲ್ಲಿ ಖ್ಯಾತಿಗಳಿಸಿದ್ದ ಈ ನಟಿಯ ಶವ ನಜರೆತ್ಪಟ್ಟೈನ ಪಂಚತಾರಾ ಹೋಟೆಲ್ನಲ್ಲಿ ಪತ್ತೆಯಾಗಿದೆ.
ವಿಜೆ ಚಿತ್ರಾ ಇವಿಪಿ ಫಿಲಂ ಸಿಟಿಯಲ್ಲಿ ಶೂಟಿಂಗ್ ಮುಗಿಸಿ ಇಂದು ಮುಂಜಾನೆ 2.30ರ ಸುಮಾರಿಗೆ ತಮ್ಮ ಹೋಟೆಲ್ ಕೋಣೆಗೆ ಮರಳಿದ್ದರು ಎನ್ನಲಾಗಿದೆ. ಮೃತ ನಟಿಗೆ ಉದ್ಯಮಿ ಹೇಮಂತ್ ಎಂಬವರ ಜೊತೆ ವಿವಾಹ ಕೂಡ ನಿಶ್ಚಯವಾಗಿತ್ತು.
ವಿಜೆ ಚಿತ್ರಾ ತಮಿಳು ಚಿತ್ರರಂಗದಲ್ಲಿ ವಿವಿಧ ಚಾನೆಲ್ಗಳ ನಿರೂಪಕರಾಗಿ ಕೆಲಸ ಮಾಡಿದ್ದಾರೆ. ಪ್ರಸ್ತುತ ಅವರು ಪಾಂಡಿಯನ್ ಸ್ಟೋರ್ಸ್ ಧಾರವಾಹಿಯಲ್ಲಿ ಕಾಣಿಸಿಕೊಳ್ತಿದ್ದರು. ಸಾಮಾಜಿಕ ಜಾಲತಾಣದಲ್ಲೂ ಸಕ್ರಿಯರಾಗಿದ್ದ ನಟಿ ಸಾಕಷ್ಟು ಪೋಸ್ಟ್ಗಳ ಮೂಲಕ ಅಭಿಮಾನಿಗಳಿಗೆ ಇನ್ನಷ್ಟು ಹತ್ತಿರವಾಗಿದ್ದರು . ವಿಜೆ ಚಿತ್ರಾ ಖಿನ್ನತೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ. ಪ್ರತಿಭಾವಂತ ನಟಿ ನಿಧನಕ್ಕೆ ಅಭಿಮಾನಿ ಬಳಗ ಟ್ವಿಟರ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣದ ವೇದಿಕೆಗಳಲ್ಲಿ ಕಂಬನಿ ಮಿಡಿದಿದೆ.
ತಮಿಳಿನ ಕಿರುತೆರೆಯ ನಟಿ ವಿ.ಜೆ ಚಿತ್ರಾ ಆತ್ಮಹತ್ಯೆಗೆ ಶರಣು
