Wednesday, January 27, 2021
Home ಸುದ್ದಿ ಜಾಲ ಡೇಟಾಬೇಸ್ ನಲ್ಲಿ ನಿಮ್ಮ ಆಧಾರ್ ನೊಂದಿಗೆ ಮೊಬೈಲ್ ನಂಬರ್ ಲಿಂಕ್ ಮಾಡುವುದು ಹೇಗೆ? ಇಲ್ಲಿದೆ ನೋಡಿ

ಇದೀಗ ಬಂದ ಸುದ್ದಿ

ಡೇಟಾಬೇಸ್ ನಲ್ಲಿ ನಿಮ್ಮ ಆಧಾರ್ ನೊಂದಿಗೆ ಮೊಬೈಲ್ ನಂಬರ್ ಲಿಂಕ್ ಮಾಡುವುದು ಹೇಗೆ? ಇಲ್ಲಿದೆ ನೋಡಿ

ನವದೆಹಲಿ : ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ (ಯುಐಡಿಎಐ) ಡೇಟಾಬೇಸ್ ನಲ್ಲಿ ನಿಮ್ಮ ಆಧಾರ್ ನೊಂದಿಗೆ ಮೊಬೈಲ್ ನಂಬರ್ ಲಿಂಕ್ ಮಾಡುವುದು ಅಗತ್ಯ. ಇದಕ್ಕೆ ಅನೇಕ ಕಾರಣಗಳಿವೆ. ಅದರಲ್ಲಿ ಒಂದು ಎಂದರೆ ಈ ನೋಂದಾಯಿತ ಮೊಬೈಲ್ ನಂಬರ್ ನಲ್ಲಿ ಒನ್ ಟೈಮ್ ಪಾಸ್ ವರ್ಡ್ (ಒಟಿಪಿ) ಸಿಗುತ್ತದೆ, ಅದನ್ನು ವೆರಿಫಿಕೇಶನ್ ಗೆ ಬಳಸಲಾಗುತ್ತದೆ.

ನಿಮ್ಮ ಮೊಬೈಲ್ ಸಂಖ್ಯೆ ಆಧಾರ್ ಜೊತೆ ಲಿಂಕ್ ಆಗಿದ್ದರೆ, ಆಧಾರ್ ಆಧಾರಿತ ಒಟಿಪಿ ಮೂಲಕ ಆದಾಯ ತೆರಿಗೆ ರಿಟರ್ನ್ (ಐಟಿಆರ್) ಅನ್ನು ಸುಲಭವಾಗಿ ವೆರಿಫೈ ಮಾಡಬಹುದು. ಆಧಾರ್ ಆಧಾರಿತ ಕೆವೈಸಿ ಇದ್ದರೆ ನಿಮ್ಮ ಮೊಬೈಲ್ ನಂಬರ್ ರಿಜಿಸ್ಟರ್ ಮಾಡಿಸಿಕೊಳ್ಳುವುದು ಅಗತ್ಯ. ನಂತರವಷ್ಟೇ ಆಧಾರ್ ಆಧಾರಿತ ಒಟಿಪಿ ಮೂಲಕ ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು.

ಇದಲ್ಲದೆ, ಆಧಾರ್ ಗೆ ಸಂಬಂಧಿಸಿದ ಎಲ್ಲಾ ಸೇವೆಗಳನ್ನು ಆನ್ ಲೈನ್ ಮೂಲಕ ಪಡೆಯಲು, ನಿಮ್ಮ ಮೊಬೈಲ್ ಸಂಖ್ಯೆಗೆ ನಿಮ್ಮ ಆಧಾರ್ ಸಂಖ್ಯೆಯೊಂದಿಗೆ ಲಿಂಕ್ ಮಾಡುವುದು ಅಗತ್ಯ.

ನಿಮ್ಮ ಮೊಬೈಲ್ ನಂಬರ್ ಯುಐಡಿಎಐ ಡೇಟಾಬೇಸ್ ನಲ್ಲಿ ರಿಜಿಸ್ಟರ್ ಆಗಿದೆಯೇ ಎಂಬುದನ್ನು ನೀವು ಹೇಗೆ ಕಂಡುಹಿಡಿಯಬಹುದು ಎಂಬುದನ್ನು ಇಲ್ಲಿ ನಾವು ನಿಮಗೆ ತಿಳಿಸುತ್ತಿದ್ದೇವೆ.

ಹಂತ 1: ಮೊದಲು www.uidai.gov.in ಹೋಗಿ .

ಹಂತ 2: ‘ಮೈ ಆಧಾರ್’ ಟ್ಯಾಬ್ ನಲ್ಲಿ ‘ವೆರಿಫೈ ಇಮೇಲ್ / ಮೊಬೈಲ್ ನಂಬರ್ ‘ ಆಯ್ಕೆ ಮಾಡಿ.
ಹಂತ 3: ನಿಮ್ಮ ಸಿಸ್ಟಂನಲ್ಲಿ ಹೊಸ ಟ್ಯಾಬ್ ತೆರೆದುಕೊಳ್ಳುತ್ತದೆ. ನಿಮ್ಮ ಆಧಾರ್ ಸಂಖ್ಯೆಯನ್ನು ಇಲ್ಲಿ ನಮೂದಿಸಿ, ನೀವು ಪರಿಶೀಲಿಸಬೇಕಾದ ಮೊಬೈಲ್ ಸಂಖ್ಯೆ ಅಥವಾ ಇಮೇಲ್ ಐಡಿಯನ್ನು ನಮೂದಿಸಿ.

ಹಂತ 4: ಕ್ಯಾಪ್ಚಾ ಕೋಡ್ ನಮೂದಿಸಿ ‘ಸೆಂಡ್ ಒಟಿಪಿ’ .

ನಮೂದಿಸಿದ ಮೊಬೈಲ್ ಸಂಖ್ಯೆ ಯುಐಡಿಎಐನ ರೆಕಾರ್ಡ್ ಗೆ ಹೋಲಿಕೆಯಾದರೆ, ನಿಮ್ಮ ರೆಕಾರ್ಡ್ ಮಾಡಿದ ಮೊಬೈಲ್ ಈಗಾಗಲೇ ಅದರ ರೆಕಾರ್ಡ್ ನಲ್ಲಿ ವೆರಿಫೈ ಆಗಿದೆ ಎಂಬ ಸಂದೇಶ ಸ್ಕ್ರೀನ್ ಮೇಲೆ ಬರುತ್ತದೆ. ಇದು ಮಾಡದಿದ್ದಲ್ಲಿ, ಅಂದರೆ, ನಮೂದಿಸಿದ ಮೊಬೈಲ್ ಸಂಖ್ಯೆ ಯುಐಡಿಎಐ ದಾಖಲೆಗಳಿಗೆ ಹೊಂದಿಕೆಯಾಗುವುದಿಲ್ಲ, ಆಗ ನಮೂದಿಸಿರುವ ಮೊಬೈಲ್ ಸಂಖ್ಯೆ ಯುಐಡಿಎಐ ದಾಖಲೆಗಳೊಂದಿಗೆ ಹೋಲಿಕೆಯಾಗುವುದಿಲ್ಲ ಎಂದು ತಿಳಿಸಲಾಗುತ್ತದೆ.

ಮೊಬೈಲ್ ಸಂಖ್ಯೆಯನ್ನು ಅಪ್ ಡೇಟ್ ಮಾಡುವುದು ಹೇಗೆ
ನಮೂದಿಸಿದ ಮೊಬೈಲ್ ಸಂಖ್ಯೆ ಯುಐಡಿಎಐ ದಾಖಲೆಗಳಿಗೆ ಹೊಂದಿಕೆಯಾಗದಿದ್ದರೆ, ಅದನ್ನು ಅಪ್ ಡೇಟ್ ಮಾಡಲು ನೀವು ಹತ್ತಿರದ ಆಧಾರ್ ಕೇಂದ್ರಕ್ಕೆ ಹೋಗಬೇಕಾಗುತ್ತದೆ. ಆಧಾರ್ ಕೇಂದ್ರದಲ್ಲಿ ನಿಮ್ಮ ಮೊಬೈಲ್ ನಂಬರ್ ಅಪ್ ಡೇಟ್ ಮಾಡಲು ನೀವು 50 ರೂಪಾಯಿ ಪಾವತಿಸಬೇಕಾಗುತ್ತದೆ. ಮೊಬೈಲ್ ಸಂಖ್ಯೆ ಅಪ್ ಡೇಶನ್ ಆನ್‌ಲೈನ್‌ ಆನ್‌ಲೈನ್‌ಆಗುವುದಿಲ್ಲ ಎಂಬುದನ್ನು ನೆನಪಿಡಿ

TRENDING