Wednesday, January 27, 2021
Home ರಾಜಕೀಯ ಮಾಜಿ ಪ್ರಧಾನಿ ದೇವೇಗೌಡರ ಕಣ್ಣೀರ ಶಾಪ ತುಮಕೂರಿಗೆ ತಟ್ಟುತ್ತೆ: ಎಚ್‌.ಡಿ.ರೇವಣ್ಣ

ಇದೀಗ ಬಂದ ಸುದ್ದಿ

ಮಾಜಿ ಪ್ರಧಾನಿ ದೇವೇಗೌಡರ ಕಣ್ಣೀರ ಶಾಪ ತುಮಕೂರಿಗೆ ತಟ್ಟುತ್ತೆ: ಎಚ್‌.ಡಿ.ರೇವಣ್ಣ

 ಚನ್ನರಾಯಪಟ್ಟಣ: ಲೋಕಸಭಾ ಚುನಾವಣೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡರನ್ನು ಕಣ್ಣೀರು ಹಾಕಿಸಿದ ಶಾಪ ಶೀಘ್ರದಲ್ಲಿ ತುಮಕೂರಿಗೆ ತಟ್ಟಲಿದೆ ಎಂದು ಶಾಸಕ ಎಚ್‌.ಡಿ.ರೇವಣ್ಣ ಹೇಳಿದರು. ಪಟ್ಟಣದ ಕೃಷಿ ಉತ್ಪನ್ನ ಮಾರು ಕಟ್ಟೆ ಸಮಿತಿ ಆವರಣದಲ್ಲಿ ನಡೆದ ಜೆಡಿಎಸ್‌ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ತುಮಕೂರು ಜಿಲ್ಲೆಯನ್ನು
ಸಂಪೂರ್ಣ ನೀರಾವರಿ ಮಾಡಲು ಮಾಜಿ ಪ್ರಧಾನಿ ದೇವೇಗೌಡರು ಹಗಲಿರುಳು ಶ್ರಮಿಸಿದ್ದರು. ಆದರೆ, ಅಲ್ಲಿನ ಮುಖಂಡರು ಅವರನ್ನೇ ಕಣಕ್ಕೆ ಇಳಿಸಿ, ವಿಶ್ವಾಸ ದ್ರೋಹ ಮಾಡಿದ್ದಾರೆ. ಅವರಿಗೆ ಆ ದೇವರೇ ಶಿಕ್ಷೆಕೊಡುತ್ತಾನೆ ಎಂದುಹೇಳಿದರು.

ದೇವೇಗೌಡರು ತುಮಕೂರಿನಿಂದ ಲೋಕಸಭೆಗೆ ಹೋದರೆ ಹೇಮಾವತಿ ನೀರು ಹರಿಸುವುದಿಲ್ಲ ಎಂದು ತಪ್ಪು ಸಂದೇಶ ಸಾರಿದಲ್ಲದೆ, ಜೆಡಿಎಸ್‌ ಪಕ್ಷದ ಕೆಲ ಮುಖಂಡರು ವಿರೋಧ ಪಕ್ಷದೊಂದಿಗೆ ಚುನಾವಣೆ ವೇಳೆ ಕೈ ಜೋಡಿಸಿದ್ದರಿಂದ ‌ ಸೊಲುವಂತಾಯಿತು, ಇದರಿಂದ ಅವರು ಕುಗ್ಗಿ ಹೋಗಿದ್ದಾರೆ, ಜಿಲ್ಲೆಗೆ ಹೋಲಿಸಿದರೆ ತುಮಕೂರಿಗೆ ಹೆಚ್ಚು ನೀರು ಹೇಮಾವತಿ
ಅಣೆಕಟ್ಟೆಯಿಂದ ಹರಿಯುತ್ತಿದೆ ಎಂದು ತಿಳಿಸಿದರು.

ರಾಷ್ಟ್ರೀಯ ಪಕ್ಕಗಳ ಒಳ ಒಪ್ಪಂದ: ಪಕ್ಷದ ವರಿಷ್ಠ ದೇವೇಗೌಡರು ಹಾಗೂ ಜೆಡಿಎಸ್‌ ಪಕ್ಷವನ್ನು ಮುಗಿಸಲು ಕಾಂಗ್ರೆಸ್‌ ಹಾಗೂ ಬಿಜೆಪಿ ಎರಡೂ ರಾಷ್ಟ್ರೀಯ ಪಕ್ಷಗಳು ಒಳ ಒಪ್ಪಂದ ಮಾಡಿಕೊಂಡಿವೆ. ಇದು ಹೆಚ್ಚು ದಿನ ನಡೆಯುವುದಿಲ್ಲ, ದೇವೇಗೌಡರ ಮಾರ್ಗದರ್ಶನ, ಯುವಕರಾದ ನಿಖೀಲ್‌ ಮತ್ತು ಪ್ರಜ್ವಲ್‌ ಮೂಲಕ ರಾಜ್ಯದಲ್ಲಿ ಪಕ್ಷ ಸಂಘಟನೆ ಮಾಡುತ್ತೇವೆ ಎಂದು ಸವಾಲು ಹಾಕಿದರು.

TRENDING