Friday, January 15, 2021
Home ಸುದ್ದಿ ಜಾಲ ಕ್ರಿಸ್ ಮಸ್ ಹಬ್ಬದ ವಿಶೇಷವಾಗಿ 250 ಬಗೆಯ ಮಾಸ್ಕ್ ​ಗಳನ್ನ ಮಾರುಕಟ್ಟೆಗೆ ಪರಿಚಯಿಸಿದ ‘ಟೋಕಿಯೋ...

ಇದೀಗ ಬಂದ ಸುದ್ದಿ

ಕ್ರಿಸ್ ಮಸ್ ಹಬ್ಬದ ವಿಶೇಷವಾಗಿ 250 ಬಗೆಯ ಮಾಸ್ಕ್ ​ಗಳನ್ನ ಮಾರುಕಟ್ಟೆಗೆ ಪರಿಚಯಿಸಿದ ‘ಟೋಕಿಯೋ ಸಂಸ್ಥೆ’

 ಟೋಕಿಯೋದಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಲೇ ಇದೆ. ಹೀಗಾಗಿ ಜಪಾನ್​ ರಾಜಧಾನಿಯ ಸಮೀಪದಲ್ಲಿರುವ ಅಂಗಡಿಯೊಂದು ಕ್ರಿಸ್​​ ಮಸ್​ ಹಬ್ಬದ ವಿಶೇಷವಾಗಿ 250 ಬಗೆಯ ಮಾಸ್ಕ್​ಗಳನ್ನ ಮಾರುಕಟ್ಟೆಗೆ ಪರಿಚಯಿಸಿದೆ. ಇದರಲ್ಲಿ ಅಲಂಕಾರಿಕ ದೀಪಗಳನ್ನ ಹೊಂದಿರುವ ಮಾಸ್ಕ್​​ಗಳೂ ಸೇರಿವೆ.

ಯೊಕೊಹಾಮಾದಲ್ಲಿ ಟೋಕಿಯೋ ಮಾಸ್ಕ್​ ಲ್ಯಾಂಡ್​ ಎಂಬ ಅಂಗಡಿ ಕಳೆದ ತಿಂಗಳು ತಲೆ ಎತ್ತಿದೆ. ಇಲ್ಲಿ ಮಾಸ್ಕ್​ ಮಾರಾಟ ಮಾತ್ರವಲ್ಲದೆ ಮಾಸ್ಕ್​ ತಯಾರಿಸುವ ಕಾರ್ಯಾಗಾರವನ್ನೂ ಮಾಡಲಾಗುತ್ತೆ. ಜಪಾನ್​​ನಲ್ಲಿ ಕೊರೊನಾ ವೈರಸ್​ಗೂ ಮೊದಲೇ ಮಾಸ್ಕ್​​ಗಳ ಬಳಕೆ ಇದೆ. ಚಳಿಗಾಲದ ಸಂದರ್ಭದಲ್ಲಿ ಇಲ್ಲಿ ಪ್ರತಿವರ್ಷವೂ ಜನರು ಮಾಸ್ಕ್​ ಬಳಕೆ ಮಾಡುತ್ತಾರೆ.

ಮಾಸ್ಕ್​​​ ಧರಿಸಿ ಎಂದು ಜಪಾನ್​​ನಲ್ಲಿ ಯಾವುದೇ ಕಾನೂನು ಆದೇಶ ಇಲ್ಲದೇ ಇದ್ದರೂ ಸಹ ಟೋಕಿಯೋದಲ್ಲಿ ನಿಮಗೆ ಮಾಸ್ಕ್​ ಧರಿಸದೇ ಓಡಾಡುವ ಜನರು ಕಾಣಸಿಗೋದು ತುಂಬಾನೇ ಕಡಿಮೆ.

TRENDING