Wednesday, January 27, 2021
Home ರಾಜ್ಯ ರಾಜ್ಯ ಸರ್ಕಾರದಿಂದ ಬಡಜನತೆಗೆ ಭರ್ಜರಿ ಸಿಹಿಸುದ್ದಿ

ಇದೀಗ ಬಂದ ಸುದ್ದಿ

ರಾಜ್ಯ ಸರ್ಕಾರದಿಂದ ಬಡಜನತೆಗೆ ಭರ್ಜರಿ ಸಿಹಿಸುದ್ದಿ

ಹಾಸನ : ನ 15 ರಿಂದ 20 ದಿನಗಳಲ್ಲಿ ರಾಜ್ಯದಲ್ಲಿ ಸುಧಾರಿತ ಹಾಗೂ ಕ್ರಾಂತಿಕಾರಿ ಪಿಂಚಣಿ ಯೋಜನೆ ಜಾರಿಗೆ ಬರಲಿದೆ ಎಂದು ಕಂದಾಯ ಸಚಿವರಾದ ಆರ್ .ಅಶೋಕ್ ತಿಳಿಸಿದ್ದಾರೆ.

ಹಾಸನ ಜಿಲ್ಲೆ ಚನ್ನರಾಯಪಟ್ಟಣ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅರ್ಹ ಬಡವರಿಗೆ ಅರ್ಜಿ ರಹಿತ ಪಿಂಚಣಿ ಮಂಜೂರು ಹಾಗೂ ನೇರ ನಗದು ವರ್ಗಾವಣೆ ವ್ಯವಸ್ಥೆ ಜಾರಿಗೆ ಬರಲಿದೆ ಎಂದು ಹೇಳಿದರು.

ಪಿಂಚಣಿ ವಿತರಣೆ ವ್ಯವಸ್ಥೆಯಲ್ಲಿ ಪ್ರತಿ ವರ್ಷ ಶೇಕಡ ಮೂರರಿಂದ ನಾಲ್ಕು ರಷ್ಟು ಹಣ ದುರುಪಯೋಗವಾಗುತ್ತಿದ್ದೆ ಇದರಿಂದ 400 ರಿಂದ 500ಕೋಟಿ ಹಣ ನಷ್ಟವಾಗುತ್ತಿದೆ .ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಎಲ್ಲಾ ಪಿಂಚಣಿದಾರ ವಿವರಗಳನ್ನು ಆಧಾರ್ ಸಂಖ್ಯೆಯೊಂದಿಗೆ ಜೋಡಣೆ ಮಾಡಲಾಗುತ್ತಿದೆ ಎಂದು ಕಂದಾಯ ಸಚಿವರು ಹೇಳಿದರು . 60 ವರ್ಷ ತುಂಬಿದ ,ನಾಲ್ಕು ಎಕರೆಗೂ ಕಡಿಮೆ ಜಮೀನು ಇರುವವರೆಲ್ಲರಿಗೂ ಅಧಿಕಾರಿಗಳೆ ಫಲಾನುಭವಿಗಳ ಮನೆ ಬಾಗಿಲಿಗೆ ತೆರಳಿ ಪಿಂಚಣಿ ಮಂಜೂರು ಮಾಡಲಿದ್ದಾರೆ ಎಂದರು.

ಪಿಂಚಣಿ ವಿತರಣೆಗೆ ಸರ್ಕಾರದಲ್ಲಿ ಹಣಕಾಸಿಗೆ ಯಾವುದೇ ಕೊರತೆ ಇಲ್ಲ. ಎಲ್ಲಾ ಜಿಲ್ಲಾಧಿಕಾರಿಗಳ ಪಿ.ಡಿ ಖಾತೆಯಲ್ಲಿ ಸಾಕಷ್ಟು ಹಣ ಇದೆ ಎಂದು ಅವರು ಅಂಕಿ ಅಂಶ ಒದಗಿಸಿದರು. ಬಗರ್ ಹುಕುಂ ಸಾಗುವಳಿ ಅರ್ಜಿ ಪರಿಶೀಲನೆಗೆ ಶೇ 90 ರಷ್ಟು ಸಕ್ರಮ ಸಮಿತಿಗಳನ್ನು ರಚಿಸಲಾಗಿದೆ ಉಳಿದ ಸಮಿತಿಗಳನ್ನು ಆದಷ್ಟು ಬೇಗ ಪೂರ್ಣಗೊಳಿಸಲಾಗುವುದು ಎಂದು ಆರ್.ಆಶೋಕ್ ಹೇಳಿದರು . ಹೊಸದಾಗಿ ಅರ್ಜಿ ಸಲ್ಲಿಕೆಗೆ ಅವಧಿ ವಿಸ್ತರಣೆ ಮಾಡುವ ಬಗ್ಗೆಯೂ ಬೇಡಿಕೆ ಇದ್ದು, ಸದನದಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.

ರಾಜ್ಯದಲ್ಲಿ ಗ್ರಾಮೀಣಾಭಿವೃದ್ಧಿಗೂ ಚಾಲನೆ ನೀಡಿದ್ದೇವೆ. 14ನೇ ಹಣಕಾಸಿನಲ್ಲಿ‌ ಪ್ರತಿ ಗ್ರಾಮ ಪಂಚಾಯತ್ ಗೆ ಒಂದು ಕೋಟಿ ರೂ ಅನುದಾನ ದೊರೆಯಲಿದೆ. ಇದರೊಂದಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಎಲ್ಲಾ ಯೋಜನೆಗಳನ್ನು ಗ್ರಾಮ ಪಂಚಾಯಿತಿ ಮತ್ತು ಪ್ರತಿ ಹಳ್ಳಿಹಳ್ಳಿಗೂ ತಲುಪಿಸುವ ಕಾರ್ಯ ಮಾಡಲಾಗುವುದು ಎಂದರು.

ಜಿಲ್ಲಾ ಉಸ್ತುವಾರಿ ಸಚಿವರಾದ ಕೆ ಗೋಪಾಲಯ್ಯ ,ಸಚಿವರಾದ ಎಸ್.ಟಿ‌ ಸೋಮಶೇಖರ್, ನಾರಾಯಣಗೌಡ ,ಶಾಸಕರಾದ ಪ್ರೀತಂ ಗೌಡ ,ಚಲವಾದಿ ನಾರಾಯಣ ಸ್ವಾಮಿ,ಎನ್ ರವಿಕುಮಾರ್ ಹುಲ್ಲಹಳ್ಳಿ ಸುರೇಶ್ ಕುಮಾರ್ ಮತ್ತಿತರರು ಹಾಜರಿದ್ದರು.

TRENDING