Wednesday, January 27, 2021
Home ಅಂತರ್ ರಾಷ್ಟ್ರೀಯ ಅಮೆರಿಕ : ವೈಜ್ಞಾನಿಕ ಸಲಹೆಗಾರ ಹುದ್ದೆಗೆ ರಾಜೀನಾಮೆ ನೀಡಿದ ಡಾ. ಸ್ಕಾಟ್ ಅಟ್ಲಾಸ್

ಇದೀಗ ಬಂದ ಸುದ್ದಿ

ಅಮೆರಿಕ : ವೈಜ್ಞಾನಿಕ ಸಲಹೆಗಾರ ಹುದ್ದೆಗೆ ರಾಜೀನಾಮೆ ನೀಡಿದ ಡಾ. ಸ್ಕಾಟ್ ಅಟ್ಲಾಸ್

 ವಾಷಿಂಗ್ಟನ್‌: ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ವೈಜ್ಞಾನಿಕ ಸಲಹೆಗಾರ ಡಾ. ಸ್ಕಾಟ್ ಅಟ್ಲಾಸ್ ಅವರು ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

ಈ ಬಗ್ಗೆ ಡಾ. ಸ್ಕಾಟ್ ಅಟ್ಲಾಸ್ ಅವರು ಸೋಮವಾರ ಟ್ವೀಟ್‌ ಮಾಡಿದ್ದಾರೆ.

‘ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದ ನರರೋಗಶಾಸ್ತ್ರಜ್ಞ ಡಾ. ಸ್ಕಾಟ್ ಅಟ್ಲಾಸ್ ಅವರಿಗೆ ಸಾರ್ವಜನಿಕ ಆರೋಗ್ಯ ಮತ್ತು ಪಿಡುಗು ಕಾಯಿಲೆಗಳ ನಿವಾರಣೆ ಬಗ್ಗೆ ಯಾವುದೇ ಅನುಭವಿಲ್ಲ. ಅವರನ್ನು ತಾತ್ಕಾಲಿಕವಾಗಿ ನೇಮಿಸಲಾಗಿತ್ತು. ಸದ್ಯ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ’ ಎಂದು ಶ್ವೇತಭವನ ತಿಳಿಸಿದೆ.

ಕೊರೊನಾ ಸೋಂಕು ನಿಯಂತ್ರಣ ಕ್ರಮಗಳ ಕುರಿತಾಗಿ ಅಟ್ಲಾಸ್‌ ಮತ್ತು ಸರ್ಕಾರದ ವಿಜ್ಞಾನಿಗಳಾದ ಡಾ. ಆಂಥೋನಿ ಫೌಸಿ ಮತ್ತು ಡಾ. ಡೆಬೊರಾ ಬಿರ್ಕ್ಸ್ ವಾಗ್ವಾದ ನಡೆದಿತ್ತು. ಕೊರೊನಾ ಸೋಂಕು ನಿಯಂತ್ರಿಸಲು ಕಠಿಣ ಕ್ರಮದ ಅವಶ್ಯಕತೆಯಿಲ್ಲ ಎಂಬುದು ಅಟ್ಲಾಸ್‌ ಅವರ ವಾದವಾಗಿತ್ತು.

TRENDING