Wednesday, January 27, 2021
Home ಜಿಲ್ಲೆ ಉಡುಪಿ ಉಡುಪಿ ಕೃಷ್ಣ ಮಠದ ಫಲಕದಲ್ಲಿ ಕನ್ನಡ ಮಾಯ :ಪ್ರತ್ಯಕ್ಷವಾದ ತುಳು, ಸಂಸ್ಕೃತ

ಇದೀಗ ಬಂದ ಸುದ್ದಿ

ಉಡುಪಿ ಕೃಷ್ಣ ಮಠದ ಫಲಕದಲ್ಲಿ ಕನ್ನಡ ಮಾಯ :ಪ್ರತ್ಯಕ್ಷವಾದ ತುಳು, ಸಂಸ್ಕೃತ

ಉಡುಪಿ : ಉಡುಪಿ ಕೃಷ್ಣಮಠದ ಮಹಾದ್ವಾರದಲ್ಲಿ ಹಾಕಲಾದ ಫಲಕದಲ್ಲಿ ಕನ್ನಡ ಮಾಯವಾಗಿದೆ.

ಇನ್ನೂ ನವೆಂಬರ್ ಮುಗಿದು ಒಂದು ದಿನವಾಗಿಲ್ಲ. ಆಗಲೇ ಪ್ರಸಿದ್ಧ ಉಡುಪಿ ಕೃಷ್ಣಮಠದ ಮುಖ್ಯ ಮಹಾದ್ವಾರದಲ್ಲಿ ಕನ್ನಡದಲ್ಲಿ ಹಾಕಲಾಗಿದ್ದ ಕೃಷ್ಣಮಠ ಎಂಬ ದೊಡ್ಡ ಫಲಕದಲ್ಲಿ ಕನ್ನಡ ಕಣ್ಮರೆಯಾಗಿದೆ.

ಅದಮಾರು ಮಠದ ಪರ್ಯಾಯ ನಡೆಯುತ್ತಿದೆ. ಮಠವನ್ನು ನವೀಕರಣ ಮಾಡುವ ಜೊತೆಗೆ ಕನ್ನಡದ ಬೋರ್ಡು ಕಳಚಿ ಹೊಸ ಬೋರ್ಡ್ ಅಳವಡಿಸಿದ್ದಾರೆ. ಈ ಜಾಗದಲ್ಲಿ ತುಳು ಮತ್ತು ಸಂಸ್ಕೃತದಲ್ಲಿ ಶ್ರೀಕೃಷ್ಣಮಠ ಎಂದು ಬರೆಯಲಾಗಿದೆ. ಶ್ರೀಕೃಷ್ಣಮಠ ರಜತಪೀಠ ಪುರ ಎಂದು ತುಳುವಿನಲ್ಲೂ, ಶ್ರೀಕೃಷ್ಣಮಠ ರಜತಪೀಠ ಪುರಂ ಎಂದು ಸಂಸ್ಕೃತದಲ್ಲಿ ಬರೆಯಲಾಗಿದೆ.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕನ್ನಡ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

TRENDING