Wednesday, January 27, 2021
Home ಬೆಂಗಳೂರು ನಮ್ಮ ಮೆಟ್ರೋ ಪ್ರಯಾಣಿಕರಿಗೊಂದು ಗುಡ್ ನ್ಯೂಸ್

ಇದೀಗ ಬಂದ ಸುದ್ದಿ

ನಮ್ಮ ಮೆಟ್ರೋ ಪ್ರಯಾಣಿಕರಿಗೊಂದು ಗುಡ್ ನ್ಯೂಸ್

ಬೆಂಗಳೂರು, ಡಿ. 01 : ನಮ್ಮ ಮೆಟ್ರೋ ಪ್ರಯಾಣಿಕರಿಗೆ ಬಿಎಂಆರ್‌ಸಿಎಲ್ ಸಿಹಿ ಸುದ್ದಿಯನ್ನು ನೀಡಿದೆ. ಇನ್ನು ಮುಂದೆ ಮೆಟ್ರೋ ನಿಲ್ದಾಣದಲ್ಲಿಯೇ ಸ್ಮಾರ್ಟ್ ಕಾರ್ಡ್ ರಿಚಾರ್ಜ್ ಮಾಡಬಹುದಾಗಿದೆ. ಕೋವಿಡ್ ಕಾರಣ ನಿಲ್ದಾಣದಲ್ಲಿ ರಿಚಾರ್ಜ್ ಸೌಲಭ್ಯ ಸ್ಥಗಿತಗೊಳಿಸಲಾಗಿತ್ತು.

ನಮ್ಮ ಮೆಟ್ರೋ ನಿಲ್ದಾಣದಲ್ಲಿಯೇ ಮೆಟ್ರೋ ಸ್ಮಾರ್ಟ್ ಕಾರ್ಡ್ ರಿಚಾರ್ಜ್ ಮಾಡುವ ಸೇವೆಯನ್ನು ಬಿಎಂಆರ್‌ಸಿಎಲ್ ಪುನಃ ಆರಂಭಿಸಿದೆ. ಆದರೆ, ಪ್ರಯಾಣಿಕರು ಹಣ ಕೊಡುವಂತಿಲ್ಲ, ಡಿಜಿಟಲ್ ಪೇಮೆಂಟ್ ಬಳಕೆ ಮಾಡಬೇಕು.

ಕೋವಿಡ್ ಹಿನ್ನಲೆಯಲ್ಲಿ ಜನರ ಸಂಪರ್ಕ ಕಡಿಮೆಗೊಳಿಸಲು ಮೆಟ್ರೋ ನಿಲ್ದಾಣದಲ್ಲಿ ಸ್ಮಾರ್ಟ್ ಕಾರ್ಡ್ ರಿಚಾರ್ಜ್ ಮಾಡುವ ಸೇವೆ ಸ್ಥಗಿತಗೊಳಿಸಲಾಗಿತ್ತು. ಜನರು ಬಿಎಂಆರ್‌ಸಿಎಲ್ ವೆಬ್ ಸೈಟ್‌ಗೆ ಭೇಟಿ ನೀಡಿ ಕಾರ್ಡ್ ರಿಚಾರ್ಜ್ ಮಾಡಬೇಕಿತ್ತು.

ಡೆಬಿಟ್, ಕ್ರೆಡಿಟ್, ಪೇಟಿಎಂ, ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಜನರು ಕಾರ್ಡ್ ರಿಚಾರ್ಜ್ ಮಾಡಿಕೊಳ್ಳಬಹುದು. ಹಿಂದೆ ಇದ್ದಂತೆ ಈಗಲೂ ಮೆಟ್ರೋ ನಿಲ್ದಾಣದಲ್ಲಿ ಒನ್ ಟೈಂ ಟ್ರಾವೆಲ್ ಟೋಕನ್ ನೀಡುವುದಿಲ್ಲ ಎಂದು ಬಿಎಂಆರ್‌ಸಿಎಲ್ ಹೇಳಿದೆ.

ಲಾಕ್ ಡೌನ್ ಮುಗಿದ ಬಳಿಕ ಮೆಟ್ರೋ ಸಂಚಾರ ಆರಂಭವಾಗಿದೆ. ಆದರೆ, ಮೆಟ್ರೋ ನಿಲ್ದಾಣದಲ್ಲಿ ಟೋಕನ್ ನೀಡುವುದಿಲ್ಲ. ಮೆಟ್ರೋ ರೈಲಿನಲ್ಲಿ ಸಂಚಾರ ನಡೆಸಲು ಜನರು ಕಡ್ಡಾಯವಾಗಿ ಸ್ಮಾರ್ಟ್ ಕಾರ್ಡ್ ಬಳಕೆ ಮಾಡಬೇಕಿದೆ.

TRENDING