Wednesday, January 27, 2021
Home ಬೆಂಗಳೂರು ರಾಜ್ಯ ಸರ್ಕಾರದಿಂದ `ಮರಾಠ ಅಭಿವೃದ್ಧಿ ನಿಗಮ' ಸ್ಥಾಪಿಸಿ ಅಧಿಕೃತ ಆದೇಶ

ಇದೀಗ ಬಂದ ಸುದ್ದಿ

ರಾಜ್ಯ ಸರ್ಕಾರದಿಂದ `ಮರಾಠ ಅಭಿವೃದ್ಧಿ ನಿಗಮ’ ಸ್ಥಾಪಿಸಿ ಅಧಿಕೃತ ಆದೇಶ

ಬೆಂಗಳೂರು: ಮರಾಠ ಪ್ರಾಧಿಕಾರಕ್ಕೆ 50 ಕೋಟಿ ಅನುದಾನ ಮಂಜೂರು ಮಾಡಿ ಹಿಂದುಳಿದ ವರ್ಗಗಳ ಇಲಾಖೆ ವ್ಯಾಪ್ತಿಯಲ್ಲಿ ಪ್ರಾಧಿಕಾರ ರಚನೆಗೆ ಸಿಎಂ ಬಿಎಸ್ವೈ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.

ಮರಾಠ ಸಮುದಾಯದ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಧಾರ್ಮಿಕ ಅಭಿವೃದ್ಧಿಗಾಗಿ ನಿಗಮ ಸ್ಥಾಪನೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಆದೇಶಿಸಿದೆ.ಈ ನಡುವೆ ಮರಾಠಾ ಪ್ರಾಧಿಕಾರ ರಚನೆಗೆವ ವಿರೋಧಿಸಿ, ಸೆಂಬರ್ 5ರಂದು 1,400 ಕನ್ನಡಪರ ಸಂಘಟನೆಗಳು ಬಂದ್​ನಲ್ಲಿ ಭಾಗವಹಿಸಲಿವೆ ಅಂದು ಮುಖ್ಯಮಂತ್ರಿಗಳಿಗೆ ತಾಕತ್ತಿದ್ದರೆ ಬಂದ್ ಅನ್ನು ನಿಲ್ಲಿಸಲಿ ಎಂದು ವಾಟಾಳ್ ನಾಗರಾಜ್ ಅವರು ಸವಾಲು ಹಾಕಿದ್ದಾರೆ. ಕರ್ನಾಟಕ ಬಂದ್ ನಂತರವೂ ಮರಾಠಾ ಪ್ರಾಧಿಕಾರ ಮುಂದುವರಿದರೆ ಜೈಲು ಚಳವಳಿ ನಡೆಸಬೇಕಾದೀತು ಎಂದು ಎಚ್ಚರಿಕೆ ನೀಡಿದ್ದಾರೆ.

TRENDING