Wednesday, January 27, 2021
Home ಬೆಂಗಳೂರು ರಾಜ್ಯದಲ್ಲಿ ಈಗಿರುವ ಗೋಹತ್ಯೆ ನಿಷೇಧ ಕಾಯ್ದೆ ಮುಂದುವರೆಯಲಿ, ಹೊಸ ಕಾಯ್ದೆ ಬೇಡ: ಸಿದ್ದರಾಮಯ್ಯ

ಇದೀಗ ಬಂದ ಸುದ್ದಿ

ರಾಜ್ಯದಲ್ಲಿ ಈಗಿರುವ ಗೋಹತ್ಯೆ ನಿಷೇಧ ಕಾಯ್ದೆ ಮುಂದುವರೆಯಲಿ, ಹೊಸ ಕಾಯ್ದೆ ಬೇಡ: ಸಿದ್ದರಾಮಯ್ಯ

ಬೆಂಗಳೂರು : ರಾಜ್ಯದಲ್ಲಿ ಈ ಹಿಂದೆ ಜಾರಿಗೊಳಿಸಿದ್ದ ಗೋಹತ್ಯೆ ನಿಷೇಧ ಕಾಯ್ದೆಯೇ ಮುಂದುವರೆಯಲಿ ಹೊಸ ಕಾಯ್ದೆ ಜಾರಿಗೆ ತರುವುದು ಬೇಡ ಹೊಸ ಕಾಯ್ದೆಗೆ ನಮ್ಮ ವಿರೋಧವಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ರಾಜ್ಯ ಸರಕಾರ ಪ್ರಸಕ್ತ ಅಧಿವೇಶನದಲ್ಲಿ ಗೋಹತ್ಯೆ ನಿಷೇಧ ವಿಧೇಯಕ ಮಂಡನೆಗೆ ಸಿದ್ದತೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಮುಸ್ಲಿಂ ಧಾರ್ಮಿಕ ಮುಖಂಡರ ನಿಯೋಗ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಗೋಹತ್ಯೆ ನಿಷೇಧ ಕಾಯ್ದೆಯ ಸಾಧಕ ಬಾಧಕಗಳ ಕುರಿತು ಚರ್ಚೆ ನಡೆಸಿದರು.

ವಿಧಾನಸೌಧದ ಪ್ರತಿಪಕ್ಷ ನಾಯಕರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಶಾಸಕ ರಿಜ್ವಾನ್ ಅರ್ಷದ್ ನೇತೃತ್ವದ ನಿಯೋಗ ಹಲವು ಮುಸ್ಲಿಂ ಧಾರ್ಮಿಕ ಮುಖಂಡರು ಭಾಗಿಯಾಗಿದ್ದರು.

ಗೋಹತ್ಯೆ ನಿಷಧ ಕಾಯ್ದೆ ಕುರಿತು ತರಾತುರಿಯಲ್ಲಿ ಒಪ್ಪಿಗೆ ಸೂಚಿಸಬೇಡಿ ಸರಿಯಾಗಿ ಚರ್ಚೆ ನಡೆಸಿ ಎಂದು ಮುಸ್ಲಿಂ ಮುಖಂಡರು ಹೇಳಿದ್ದಾರೆ.

ಈ ಕುರಿತು ಮಾತನಾಡಿದ ಸಿದ್ದಾರಮ್ಮಯ್ಯ ಸದ್ಯಕ್ಕೆ ಹಿಂದಿನ ಕಾಯ್ದೆಯೇ ಮುಂದುವರೆಯಲಿ ಹೊಸ ಕಾಯ್ದೆ ಬೇಡ ಅದಕ್ಕೆ ನಮ್ಮ ವಿರೋಧವಿದೆ ಎಂದ ಅವರು ಗೋವಾದಲ್ಲಿ ಬಿಜೆಪಿ ಸರ್ಕಾರ ಇದೆ ಬೇರೆ ಬೇರೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದೆ ಆದರೆ ಕರ್ನಾಟಕದಲ್ಲಿ ಮಾತ್ರ ಯಾಕೆ ನಿಷೇಧ ಮಾಡೋಕೆ ಹೊರಟಿದ್ದಾರೆ,ರಾಜ್ಯದಲ್ಲಿ ಗೋಹತ್ಯೆ ನಿಷೇಧ ಮಾಡಿದರೆ ಅನೇಕ ಕುಟುಂಬಗಳು ಬೀದಿಗೆ ಬೀಳುತ್ತದೆ ಇದರಿಂದ ಜನರಲ್ಲಿ ಭಯ ಉಂಟಾಗಿದೆ ಹಾಗಾಗಿ ನಾವು ಹೊಸ ಕಾನೂನನ್ನು ವಿರೋಧ ಮಾಡುತ್ತೇವೆ ಎಂದರು. ಈ ಕುರಿತು ಅಸೆಂಬ್ಲಿಯಲ್ಲೂ ಸಹ‌ ನಾವು ವಿರೋಧ ಮಾಡುತ್ತೇವೆ ಹಾಗಾಗಿ ಈಗಿರುವ ಗೋಹತ್ಯೆ ನಿಷೇದ ಕಾಯ್ದೆ ಮುಂದುವರಿಯಲಿ ಎಂದಿದ್ದಾರೆ.

TRENDING