Saturday, January 16, 2021
Home ಕ್ರಿಕೆಟ್ ಕ್ರೀಡೆ ಒಲಿಂಪಿಕ್ ಕ್ರೀಡಾಕೂಟಕ್ಕೆ ತಯಾರಿ ಶುರು.!

ಇದೀಗ ಬಂದ ಸುದ್ದಿ

ಒಲಿಂಪಿಕ್ ಕ್ರೀಡಾಕೂಟಕ್ಕೆ ತಯಾರಿ ಶುರು.!

 ಮುಂದಿನ ವರ್ಷಕ್ಕೆ ಮುಂದೂಡಲ್ಪಟ್ಟಿರುವ ಒಲಂಪಿಕ್​ ಕ್ರೀಡಾಕೂಟಕ್ಕೆ ಸಿದ್ಧತೆ ಜೋರಾಗಿದ್ದು ಮಂಗಳವಾರ ಟೋಕಿಯೋ ಕೊಲ್ಲಿಯಲ್ಲಿ ಒಲಿಂಪಿಕ್​ ರಿಂಗ್​​ಗಳನ್ನ ಮರುಸ್ಥಾಪಿಸಲಾಗಿದೆ.

15.3 ಮೀಟರ್​ ಎತ್ತರ ಹಾಗೂ 32.6 ಮೀಟರ್​ ಅಗಲವಿರುವ ಈ ಸ್ಮಾರಕವನ್ನ ಮರುಸ್ಥಾಪಿಸುವ ಮೂಲಕ ಕ್ರೀಡಾಕೂಟ ಸಮೀಪಿಸುತ್ತಿದೆ ಎಂಬ ಸಂಕೇತವನ್ನ ವಿಶ್ವಕ್ಕೆ ಸಾರಬೇಕು ಎಂದು ಟೋಕಿಯೋ ಮಹಾನಗರ ಸರ್ಕಾರಿ ಯೋಜನಾ ನಿರ್ದೇಶಕ ಅಟ್ಸುಶಿ ಯಾನಶಿಮಿ ಹೇಳಿದ್ದಾರೆ.

ಅಲ್ಲದೇ ಮುಂದಿನ ವರ್ಷ ಖಂಡಿತವಾಗಿಯೂ ಟೋಕಿಯೋದಲ್ಲಿ ಒಲಿಂಪಿಕ್​ ಕ್ರೀಡಾಕೂಟ ನಡೆಯಲಿದೆ ಎಂದು ಎಲ್ಲರೂ ಭಾವಿಸಬೇಕೆಂದು ನಾವು ಬಯಸುತ್ತೇವೆ ಎಂದು ಹೇಳಿದ್ರು.

TRENDING