Saturday, January 16, 2021
Home ಸಿನಿಮಾ ಅಂಡರ್ ವರ್ಲ್ಡ್ ಡಾನ್ ಪಾತ್ರದಲ್ಲಿ ಸ್ಯಾಂಡಲ್ ವುಡ್ ಗೆ ಎಂಟ್ರಿ; ರೈ ಪಾತ್ರದಲ್ಲಿರುವ ಹೀರೋ ಯಾರು...

ಇದೀಗ ಬಂದ ಸುದ್ದಿ

ಅಂಡರ್ ವರ್ಲ್ಡ್ ಡಾನ್ ಪಾತ್ರದಲ್ಲಿ ಸ್ಯಾಂಡಲ್ ವುಡ್ ಗೆ ಎಂಟ್ರಿ; ರೈ ಪಾತ್ರದಲ್ಲಿರುವ ಹೀರೋ ಯಾರು ಗೊತ್ತಾ?

 ಅಂಡರ್ ವರ್ಲ್ಡ್ ಡಾನ್ ಆಗಿ ಮೆರೆದಿದ್ದ ಮುತ್ತಪ್ಪ ರೈ ಜೀವನಾಧಾರಿತ ರೋಚಕ ಕಥೆ ಇದೀಗ ಸ್ಯಾಂಡಲ್ ವುಡ್ ನಲ್ಲಿ ಸಿನಿಮಾ ಆಗಿ ತೆರೆಗೆ ಬರಲಿದೆ. ಈಗಾಗಲೇ ಮುತ್ತಪ್ಪ ರೈ ಪಾತ್ರದ ಗ್ರ್ಯಾಂಡ್ ಎಂಟ್ರಿ ಕೂಡ ಆಗಿದ್ದು, ಫಸ್ಟ್ ಲುಕ್ ಕೂಡ ಬಿಡುಗಡೆಯಾಗಿದೆ.

2016ರಲ್ಲಿ ಮುತ್ತಪ್ಪ ರೈ ಜೀವನಾಧಾರಿತ ಕಥೆಯನ್ನು ‘ರೈ’ ಎಂಬ ಟೈಟಲ್ ನಲ್ಲಿ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಸಿನಿಮಾ ಮಾಡಲು ಹೊರಟಿದ್ದರು. ಬಾಲಿವುಡ್ ನಟ ವಿವೇಕ್ ಒಬೆರಾಯ್ ಮುತ್ತಪ್ಪ ರೈ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದೂ ಕೂಡ ಹೇಳಲಾಗಿತ್ತು. ಆದರೆ ಆ ನಂತರ ಚಿತ್ರ ಸೆಟ್ಟೇರಲಿಲ್ಲ. ಆದರೆ ಈಗ ನಿರ್ದೇಶಕ ರವಿ ಶ್ರೀವತ್ಸ ಮುತ್ತಪ್ಪ ರೈ ಚಿತ್ರವನ್ನು ತೆರಗೆ ತರಲು ಸಜ್ಜಾಗಿದ್ದಾರೆ.

ಎಂ.ಆರ್. ಎಂಬ ಟೈಟಲ್ ನಲ್ಲಿ ಭೂಗತ ಲೋಕದ ದೊರೆಯಾಗಿ ಮೆರೆದಿದ್ದ ಮುತ್ತಪ್ಪ ರೈ ಜೀವನದ ಕಥೆಯುಳ್ಳ ಸಿನಿಮಾ ಮೂಡಿ ಬರಲಿದೆಯಂತೆ. ಅಂದಹಾಗೇ ಈಗಾಗಲೇ ರೈ ಪಾತ್ರಧಾರಿಯ ಫಸ್ಟ್ ಲುಕ್ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ. ಡೆಡ್ಲಿ ಸೋಮ ಚಿತ್ರದಲ್ಲಿ ಬಾಲನಟನಾಗಿ ಅಭಿನಯಿಸಿದ್ದ ದೀಕ್ಷಿತ್, ಡಾನ್ ಪಾತ್ರದ ಮೂಲಕ ಇದೀಗ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡಲಿದ್ದಾರೆ ಎಂದು ತಿಳಿದುಬಂದಿದೆ.

TRENDING