ಎಲ್ ಪಿಜಿ ಗ್ಯಾಸ್ ಮೇಲಿನ ಸಬ್ಸಿಡಿ ಬಗ್ಗೆ ಗ್ರಾಹಕರ ಮನಸ್ಸಿನಲ್ಲಿ ಅನೇಕ ಪ್ರಶ್ನೆಗಳು ಮೂಡುತ್ವೆ. ಅದ್ರಲ್ಲೂ ಗ್ರಾಹಕರಲ್ಲಿ ಒಂದು ಪ್ರಶ್ನೆ ಯಾವಾಗ್ಲೂ ಇದ್ದೇ ಇರುತ್ತೆ. ಅದೆನೇಂದ್ರೆ, ಎಷ್ಟು ಸಬ್ಸಿಡಿ ಮೊತ್ತವನ್ನ ತಮ್ಮ ಖಾತೆಯಲ್ಲಿ ಜಮಾ ಮಾಡಲಾಗಿದೆ ಮತ್ತು ಅದನ್ನ ತಿಳಿದುಕೊಳ್ಳೋದು ಹೇಗೆ ಅನ್ನೋದು.
ಎಲ್ ಪಿಜಿ ಗ್ಯಾಸ್ ಸಿಲಿಂಡರ್ʼಗಳ ಮೇಲೆ ಸರ್ಕಾರ ಸಬ್ಸಿಡಿ ನೀಡುತ್ತಿದೆ. ಇದರಿಂದ ವರ್ಷಕ್ಕೆ 14.2 ಕೆ.ಜಿ.ಯ 12 ಸಿಲಿಂಡರ್ʼಗಳ ಪ್ರಯೋಜನ ಪಡೆಯಬೋದು. ಅದೇ ಸಮಯದಲ್ಲಿ, ಹೆಚ್ಚು ಸಂಖ್ಯೆಯ ಸಿಲಿಂಡರ್ʼಗಳನ್ನ ತೆಗೆದುಕೊಂಡಲ್ಲಿ ಗ್ರಾಹಕನು ಮಾರುಕಟ್ಟೆ ಬೆಲೆಯಲ್ಲಿ ಹಣ ಪಾವತಿಸಬೇಕಾಗುತ್ತದೆ.
ನಿಮ್ಮ ಬ್ಯಾಂಕ್ ಖಾತೆಯಲ್ಲಿ ಎಷ್ಟು ಸಬ್ಸಿಡಿ ಹಣ ಜಮಾ ಆಗಿದೆ ಎಂಬುದನ್ನ ಗ್ರಾಹಕರು ಸುಲಭವಾಗಿ ತಿಳಿದುಕೊಳ್ಳಬಹುದು.
ಇಲ್ಲಿದೆ ಸಂಪೂರ್ಣ ಪ್ರಕ್ರಿಯೆ.
* ಮೊದಲು ಅಧಿಕೃತ ವೆಬ್ಸೈಟ್ Mylpg.in ಗೆ ಭೇಟಿ ನೀಡಿ.
* ನಿಮ್ಮ ಸಿಲಿಂಡರ್ ಕಂಪನಿಯ ಮೇಲೆ (HP, India and Indane)
* ನೀವು ಅದರಲ್ಲಿ ಹೊಸ ಇಂಟರ್ಫೇಸ್ ಅನ್ನ ತೆರೆಯುತ್ತೀರಿ. ಮೆನುಗೆ ಹೋಗಿ.
* ನಿಮ್ಮ 17 ಅಂಕಿಗಳ LPG IDಯನ್ನ ನಮೂದಿಸಿ
* LPG ID ಗೊತ್ತಿಲ್ಲದಿದ್ದರೆ, ‘ನಿಮ್ಮ LPG ID ತಿಳಿಯಲು ಇಲ್ಲಿ ‘ ಯನ್ನ ಒತ್ತಿರಿ
* ಗ್ಯಾಸ್ ಕಂಪನಿಯಲ್ಲಿ ನೋಂದಾಯಿಸಲಾದ ಮೊಬೈಲ್ ಸಂಖ್ಯೆಯನ್ನ ನಮೂದಿಸಿ, LPG ಕನ್ಸ್ಯೂಮರ್ ಐಡಿ, ರಾಜ್ಯ ಮತ್ತು ವಿತರಕನ ಹೆಸರನ್ನ ನಮೂದಿಸಿ
* ಈಗ ಕೊಟ್ಟಿರುವ ಕ್ಯಾಪ್ಚಾ ನಮೂದಿಸಿ
* ಪ್ರಕ್ರಿಯೆ
* ಹೊಸ ಪುಟದಲ್ಲಿ ನೀವು LPG ID ಯನ್ನ ನೋಡುತ್ತೀರಿ
* ಈಗ ‘ಸಿಲಿಂಡರ್ ಬುಕಿಂಗ್ ಇತಿಹಾಸ ಅಥವಾ ಸಬ್ಸಿಡಿ ವರ್ಗಾವಣೆಯನ್ನ ನೋಡಿ’
* ಈಗ ನೀವು ಪಡೆದ ಸಬ್ಸಿಡಿ ಮೊತ್ತವನ್ನ ಕಾಣಿಸುತ್ತೆ.