Wednesday, January 27, 2021
Home ಅಂತರ್ ರಾಷ್ಟ್ರೀಯ ವಿಶ್ವದಾದ್ಯಂತ 6.20 ಕೋಟಿ ದಾಟಿದ ಕೊರೋನಾ ಪ್ರಕರಣಗಳ ಸಂಖ್ಯೆ

ಇದೀಗ ಬಂದ ಸುದ್ದಿ

ವಿಶ್ವದಾದ್ಯಂತ 6.20 ಕೋಟಿ ದಾಟಿದ ಕೊರೋನಾ ಪ್ರಕರಣಗಳ ಸಂಖ್ಯೆ

ವಾಷಿಂಗ್ಟನ್: ವಿಶ್ವದಾದ್ಯಂತ ಕೊರೊನಾವೈರಸ್ ಪ್ರಕರಣಗಳ ಸಂಖ್ಯೆ 62,094,127ಕ್ಕೆ ಏರಿಕೆಯಾಗಿದೆ ಎಂದು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ ವರದಿಯಲ್ಲಿ ತಿಳಿಸಿದೆ.

ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಕೊರೋನಾವೈರಸ್ ಸಂಪನ್ಮೂಲ ಕೇಂದ್ರದ ಇತ್ತೀಚಿನ ಮಾಹಿತಿಯಂತೆ, ಜಾಗತಿಕವಾಗಿ ಒಟ್ಟು ಸೋಂಕಿತರ ಸಂಖ್ಯೆ 62,094,127ಕ್ಕೆ ಏರಿಕೆಯಾಗಿದ್ದು, 1,449,709 ಮಂದಿ ಸಾವನ್ನಪ್ಪಿದ್ದಾರೆಂದು ತಿಳಿಸಿದೆ.

ಒಟ್ಟು 62,094,127 ಮಂದಿ ಸೋಂಕಿತರ ಪೈಕಿ ಈವರೆಗೂ 39,750,055 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ವಿವಿಧ ರಾಷ್ಟ್ರಗಳಲ್ಲಿ ಇನ್ನೂ 17,916,597 ಸಕ್ರಿಯ ಪ್ರಕರಣಗಳು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆಂದು ತಿಳಿದುಬಂದಿದೆ.

ಅಮೆರಿಕ ಜಗತ್ತಿನ ಜನಸಂಖ್ಯೆಯಲ್ಲಿ ಶೇಕಡಾ 4ರಷ್ಟು ಹೊಂದಿದ್ದು, ಇದುವರೆಗೆ 13,227,195ಕ್ಕೂ ಅಧಿಕ ಮಂದಿ ಸೋಂಕಿತರಾಗಿದ್ದಾರೆ. ಅಲ್ಲದೆ, 265,973 ಅಧಿಕ ಮಂದಿ ಮೃತಪಟ್ಟಿದ್ದಾರೆಂದು ವರದಿಗಳು ತಿಳಿಸಿವೆ.
ಅಮೆರಿಕ ಹಲವು ಕಡೆಗಳಲ್ಲಿ ಕೊರೋನಾ ಸೋಂಕು ಮತ್ತು ಸಾವಿನ ಪ್ರಕರಣಗಳು ಹೆಚ್ಚಾಗುತ್ತಲೇ ಇದೆ. ದಿನ ಕಳೆದಂತೆ ಕೊರೋನಾ ಕುರಿತು ಆತಂಕ ಹೆಚ್ಚಾಗುತ್ತಲೇ ಇದೆ.

ಈ ನಡುವೆ ಹೆಚ್ಚು ಕೊರೋನಾ ಬಾಧಿತ ರಾಷ್ಟ್ರಗಳಲ್ಲಿ ಅಮೆರಿಕಾ ಬಳಿಕ ಭಾರತ ಹಾಗೂ ಬ್ರೆಜಿಲ್ ರಾಷ್ಟ್ರಗಳು ಎರಡನೇ ಮತ್ತು ಮೂರನೇ ಸ್ಥಾನಗಳನ್ನು ಪಡೆದುಕೊಂಡಿದ್ದು ಭಾರತದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 9,351,109ಕ್ಕೆ ತಲುಪಿದ್ದರೆ, ಬ್ರೆಜಿಲ್ ನಲ್ಲಿ 6,238,350ಕ್ಕೆ ಏರಿಕೆಯಾಗಿದೆ.

ಅತಿ ಹೆಚ್ಚು ದೃಢಪಟ್ಟ ಕೊರೊನಾವೈರಸ್ ಪ್ರಕರಣಗಳಲ್ಲಿ, ಅಮೆರಿಕ, ಭಾರತ ಮತ್ತು ಬ್ರೆಜಿಲ್ ಮೊದಲ ಮೂರು ರಾಷ್ಟ್ರಗಳಾಗಿವೆ. ಫ್ರಾನ್ಸ್ ನಾಲ್ಕನೇ ಮತ್ತು ರಷ್ಯಾ ಐದನೇ ಸ್ಥಾನದಲ್ಲಿದೆ.

TRENDING