ಕಲಬುರಗಿ,ನ.28 : ಕ್ರಿಮಿನಾಶಕ ಸಿಂಪರಣೆ ನಂತರ ತೊಗರಿ ಬೆಳೆ ಒಣಗಿ ಹೊಗಿದ್ದ ಘಟನೆ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಹೀರಾಮಣಿ ತಾಂಡಾದಲ್ಲಿ ನಡೆದಿದೆ.
ಕೀಟಗಳ ನಿಯಂತ್ರಣ ಮತ್ತು ಉತ್ತಮ ಫಸಲಿಗಾಗಿ ರೈತ ಕ್ರಿಮಿನಾಶಕವನ್ನು ಹದಿನೈದು ದಿನದ ಹಿಂದೆ ಸಿಂಪಡಣೆ ಮಾಡಿದ್ದ. ಆದರೆ ಕ್ರಿಮಿಗಳು ಕಡಿಮೆಯಾಗುವ ಬದಲು ಬೆಳೆ ಒಣಗಿದೆ. ಹದಿನೈದು ಎಕರೆ ತೊಗರಿ ಬೆಳೆಗೆ ಕ್ರಿಮಿನಾಶಕ ಸಿಂಪಡಣೆ ಮಾಡಿದ್ದ. ಕ್ರಿಮಿನಾಶಕ ಸಿಂಪಡಣೆ ನಂತರವೇ ಬೆಳೆ ಒಣಗಿದೆ ಎಂದು ರೈತ ಅಂತಿದ್ದಾನೆ. ದಶರಥ ಎಂಬ ರೈತ ಬೆಳೆ ಕಳೆದುಕೊಂಡು ಕಂಗಾಲಾಗಿದ್ದಾನೆ.
ಇನ್ನೂ ರೈತ ಖಾಸಗಿ ಕಂಪನಿಯ ಎರಡು ಪ್ರೋಟಾನ್ ಮತ್ತು ಬಲವಾನ್ ಅನ್ನೋ ಕ್ರಿಮಿನಾಶಕ ಸಿಂಪಡಣೆ ಮಾಡಿದ್ದ. ಕ್ರಿಮಿನಾಶಕ ಕಂಪನಿ ವಿರುದ್ಧ ಕ್ರಮ ಕೈಗೊಳ್ಳುವಂತೆ ರೈತ ಆಗ್ರಹಿಸಿದ್ದಾನೆ.