Friday, January 15, 2021
Home ದೆಹಲಿ ಸಾರಿಗೆ ಸಚಿವಾಲಯದಿಂದ ಮಹತ್ವದ ಆದೇಶ: BIS ಹೆಲ್ಮೆಟ್ ಕಡ್ಡಾಯ

ಇದೀಗ ಬಂದ ಸುದ್ದಿ

ಸಾರಿಗೆ ಸಚಿವಾಲಯದಿಂದ ಮಹತ್ವದ ಆದೇಶ: BIS ಹೆಲ್ಮೆಟ್ ಕಡ್ಡಾಯ

ನವದೆಹಲಿ: ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದಿಂದ ಬಿಐಎಸ್ ಹೆಲ್ಮೆಟ್ ಗಳನ್ನು ಮಾತ್ರ ಉತ್ಪಾದನೆ, ಮಾರಾಟ ಮಾಡುವಂತೆ ತಿಳಿಸಲಾಗಿದೆ.

ಭಾರತೀಯ ಮಾನಕ ಸಂಸ್ಥೆ(BIS) ದೃಢೀಕರಿಸಿd ಹೆಲ್ಮೆಟ್ ಗಳನ್ನು ಮಾತ್ರ ಉತ್ಪಾದನೆ ಮತ್ತು ಮಾರಾಟ ಮಾಡಬೇಕು ಎಂದು ಹೇಳಲಾಗಿದೆ. ಕಳಪೆ ಹೆಲ್ಮೆಟ್ ಗಳ ಉತ್ಪಾದನೆ ಮತ್ತು ಮಾರಾಟ ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ. ಕಳಪೆ ಹೆಲ್ಮೆಟ್ ಗಳಿಂದ ಅಪಘಾತದ ವೇಳೆ ಸಾವು ಸಂಭವಿಸುವ ಸಾಧ್ಯತೆಯಿರುತ್ತದೆ. ಗುಣಮಟ್ಟದ ಹೆಲ್ಮೆಟ್ ಗಳು ಇದ್ದಲ್ಲಿ ರಕ್ಷಣೆಗೆ ಸಹಾಯವಾಗುತ್ತದೆ.

ಈ ಕಾರಣದಿಂದ ಸುಪ್ರೀಂಕೋರ್ಟ್ ಸಮಿತಿಯ ರಸ್ತೆ ಸುರಕ್ಷತೆ ಕುರಿತಾದ ನಿರ್ದೇಶನಗಳನ್ನು ಅನುಸರಿಸಿ ಕ್ರಮಕೈಗೊಳ್ಳಲಾಗಿದ್ದು, ಬಿಐಎಸ್ ದೃಢೀಕೃತ ಹೆಲ್ಮೆಟ್ ಗಳ ಉತ್ಪಾದನೆ ಮತ್ತು ಮಾರಾಟಕ್ಕೆ ಸೂಚಿಸಲಾಗಿದೆ.

TRENDING