Sunday, January 17, 2021
Home ಅಂತರ್ ರಾಜ್ಯ ಡಿಸೆಂಬರ್‌ 2ರಿಂದ ಪ್ರಯಾಣಿಕರ ರೈಲ್ವೆ ಸೇವೆ ಆರಂಭ

ಇದೀಗ ಬಂದ ಸುದ್ದಿ

ಡಿಸೆಂಬರ್‌ 2ರಿಂದ ಪ್ರಯಾಣಿಕರ ರೈಲ್ವೆ ಸೇವೆ ಆರಂಭ

ಕೋಲ್ಕತ್ತ: ಡಿಸೆಂಬರ್‌ 2ರಿಂದ 54 ರೈಲುಗಳೊಂದಿಗೆ ಪ್ರಯಾಣಿಕರ ರೈಲ್ವೆ ಸೇವೆಯನ್ನು ಪುನರಾರಂಭಿಸಲು ಪೂರ್ವ ರೈಲ್ವೆ ವಿಭಾಗ ನಿರ್ಧರಿಸಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದರು.

ಕೋವಿಡ್‌ನಿಂದಾಗಿ ಈ ವರ್ಷದ ಮಾರ್ಚ್‌ ತಿಂಗಳಲ್ಲಿ ಪ್ರಯಾಣಿಕರ ರೈಲ್ವೆ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು. ಇದೀಗ ಡಿಸೆಂಬರ್‌ 2ರಂದು ಪ್ರಯಾಣಿಕರ ರೈಲ್ವೆ ಸೇವೆಯನ್ನು ಪುನರಾರಂಭಿಸಲು ಪೂರ್ವ ರೈಲ್ವೆ ವಿಭಾಗ ಮುಂದಾಗಿದೆ.

ಹೌರಾ ವಿಭಾಗದಲ್ಲಿ 30 ರೈಲುಗಳು, ಅಸನ್ಸೋಲಾ ವಿಭಾಗದಲ್ಲಿ 22 ರೈಲುಗಳು ಮತ್ತು ಮಾಲ್ಡಾ ವಿಭಾಗದಲ್ಲಿ ಎರಡು ರೈಲುಗಳು ಸಂಚರಿಸಲಿವೆ ಎಂದು ಪೂರ್ವ ರೈಲ್ವೆ ವಿಭಾಗದ ವಕ್ತಾರರು ತಿಳಿಸಿದರು.

TRENDING