Sunday, January 17, 2021
Home ಸುದ್ದಿ ಜಾಲ ಮಾಜಿ ಸಚಿವೆ ಉಮಾಶ್ರೀ ಕಾರು ಅಪಘಾತ ಪ್ರಕರಣ: ಗಾಯಗೊಂಡಿದ್ದ ʼಆರೋಗ್ಯಾಧಿಕಾರಿʼ ಡಾ. ಸ್ಮಿತಾ ಸಾವು

ಇದೀಗ ಬಂದ ಸುದ್ದಿ

ಮಾಜಿ ಸಚಿವೆ ಉಮಾಶ್ರೀ ಕಾರು ಅಪಘಾತ ಪ್ರಕರಣ: ಗಾಯಗೊಂಡಿದ್ದ ʼಆರೋಗ್ಯಾಧಿಕಾರಿʼ ಡಾ. ಸ್ಮಿತಾ ಸಾವು

ಹುಬ್ಬಳ್ಳಿ: ನವೆಂಬರ್ 21ರಂದು ತಾಲೂಕಿನ ಬಂಡಿವಾಡ ಗ್ರಾಮದ ಬಳಿ ಮಾಜಿ ಸಚಿವ ಉಮಾಶ್ರೀ ಅವರಿಗೆ ಸೇರಿದ ಇನ್ನೋವಾ ಮತ್ತು ಬೊಲೆನೋ ಕಾರುಗಳ ನಡುವಿನ ಮುಖಾಮುಖಿ ಅಪಘಾತಉಂಟಾಗಿತ್ತು. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಆರೋಗ್ಯಾಧಿಕಾರಿ ಡಾ. ಸ್ಮಿತಾ ಮೃತಪಟ್ಟಿದ್ದಾರೆ.

ನವಲಗುಂದ ತಾಲೂಕ ಬೆಳೆಹಾರ ಗ್ರಾಮದ ಆರೋಗ್ಯಾಧಿಕಾರಿಯಾಗಿದ್ದ ಡಾ. ಸ್ಮಿತಾ ಅವ್ರು ಚಿಕಿತ್ಸೆಗೆ ಸ್ಪಂದಿಸದೇ ಶನಿವಾರ ಬೆಳಗ್ಗೆ ಕೊನೆಯುಸೆರೆಳೆದಿದ್ದಾರೆ. ಅದ್ರಂತೆ, ಈ ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ 3ಕ್ಕೇರಿದೆ.

ಅಂದ್ಹಾಗೆ, ಅಪಘಾತ ಸಂಭವಿಸಿದಾಗ ಸ್ಥಳದಲ್ಲೇ ಇಬ್ಬರು ಸಾವಿಗೀಡಾಗಿದ್ರೆ, ಇನ್ನಿಬ್ಬರು ಗಾಯಗೊಂಡಿದ್ದರು.

TRENDING