Wednesday, January 27, 2021
Home ಅಂತರ್ ರಾಷ್ಟ್ರೀಯ ಮಾಜಿ ಸಿಎಂ ಮೆಹಬೂಬಾ ಮುಫ್ತಿ ಅವರನ್ನು ಬಂಧಿಸಲಾಗಿಲ್ಲ:ಚುನಾವಣಾ ಆಯುಕ್ತ ಕೆಕೆ ಶರ್ಮಾ ಸ್ಪಷ್ಟನೆ

ಇದೀಗ ಬಂದ ಸುದ್ದಿ

ಮಾಜಿ ಸಿಎಂ ಮೆಹಬೂಬಾ ಮುಫ್ತಿ ಅವರನ್ನು ಬಂಧಿಸಲಾಗಿಲ್ಲ:ಚುನಾವಣಾ ಆಯುಕ್ತ ಕೆಕೆ ಶರ್ಮಾ ಸ್ಪಷ್ಟನೆ

 ಶ್ರೀನಗರ: ಜಮ್ಮುಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರನ್ನು ಬಂಧಿಸಲಾಗಿಲ್ಲ ಎಂದು ಜಮ್ಮು ಕಾಶ್ಮೀರದ ಚುನಾವಣಾ ಆಯುಕ್ತ ಕೆಕೆ ಶರ್ಮಾ ಸ್ಪಷ್ಟಪಡಿಸಿದ್ದಾರೆ.

ಮೆಹಬೂಬ ಮುಫ್ಟಿಯವರು ನಿನ್ನೆ ಟ್ವೀಟ್ ಮಾಡುವ ಮೂಲಕ ತಮ್ಮನ್ನು ಮತ್ತೆ ಗೃಹಬಂಧನದಲ್ಲಿರಿಸಲಾಗಿದೆ, ಬಂಧಿಸಲಾಗಿದೆ ಎಂದು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿರುವ ಚುನಾವಣಾ ಆಯುಕ್ತ ಕೆಕೆ ಶರ್ಮಾ, ಮುಫ್ತಿ ಅವರನ್ನು ಬಂಧಿಸಲಾಗಿಲ್ಲ. ಅವರು ಪುಲ್ವಾಮಕ್ಕೆ ತೆರಳುವವರಿದ್ದರು. ಆದರೆ ಭದ್ರತಾ ದೃಷ್ಟಿಯಿಂದ ಪುಲ್ವಾಮಗೆ ತೆರಳಬೇಡಿ ಎಂದಷ್ಟೇ ಸಲಹೆ ನೀಡಲಾಗಿದೆ ಎಂದು ಹೇಳಿದ್ದಾರೆ.

ಎನ್‌ಐಎ ವಶಕ್ಕೆ ಪಡೆದಿರುವ ಪಿಡಿಪಿ ನಾಯಕ ವಾಹೀದ್ ಪರ್ರಾ ಅವರ ಪುಲ್ವಾಮದಲ್ಲಿರುವ ನಿವಾಸಕ್ಕೆ ಮೆಹಬೂಬಾ ಮುಫ್ತಿ ಭೇಟಿ ನೀಡುವವರಿದ್ದರು. ಆದರೆ ಇದಕ್ಕೆ ಅವಕಾಶ ನೀಡಲಾಗಿಲ್ಲ ಎಂದು ತಿಳಿದು ಬಂದಿದೆ.

TRENDING