Friday, January 15, 2021
Home ಕೋವಿಡ್-19 BIG NEWS: ಕೊರೋನಾ ಲಸಿಕೆ ಪರಿಶೀಲನೆಗೆ ಇಂದು 3 ಮಹಾನಗರಗಳಿಗೆ ಮೋದಿ ಭೇಟಿ

ಇದೀಗ ಬಂದ ಸುದ್ದಿ

BIG NEWS: ಕೊರೋನಾ ಲಸಿಕೆ ಪರಿಶೀಲನೆಗೆ ಇಂದು 3 ಮಹಾನಗರಗಳಿಗೆ ಮೋದಿ ಭೇಟಿ

 ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇಂದು ಲಸಿಕೆ ತಯಾರಿಕಾ ಕಂಪನಿಗಳಿಗೆ ಭೇಟಿ ನೀಡಲಿದ್ದಾರೆ. ಒಂದೇ ದಿನ ದೇಶದ ಮೂರು ಮಹಾನಗರಗಳಿಗೆ ಭೇಟಿ ನೀಡಿ ಕೊರೋನಾ ಲಸಿಕೆ ಅಭಿವೃದ್ಧಿಪಡಿಸುತ್ತಿರುವ ಬಗ್ಗೆ ಮಾಹಿತಿ ಪಡೆದುಕೊಳ್ಳಲಿದ್ದಾರೆ.

ಮೂರು ವ್ಯಾಕ್ಸಿನ್ ತಯಾರಿಕಾ ಕಂಪನಿಗಳಿಗೆ ಮೋದಿ ಭೇಟಿ ನೀಡಲಿದ್ದು, ಲಸಿಕೆ ಉತ್ಪಾದನೆ ಬಗ್ಗೆ ಪರಿಶೀಲನೆ ನಡೆಸುವರು. ಇದೇ ವೇಳೆ ಲಸಿಕೆ ತಯಾರಿಯಲ್ಲಿ ತೊಡಗಿದ ವಿಜ್ಞಾನಿಗಳ ಜೊತೆಗೆ ಚರ್ಚೆ ನಡೆಸಲಿದ್ದಾರೆ.

ಮೊದಲಿಗೆ ಅಹ್ಮದಾಬಾದ್ ಜೈಡಸ್ ಬಯೋಟೆಕ್ ಪಾರ್ಕ್ ಗೆ ಭೇಟಿ ನೀಡಲಿದ್ದಾರೆ. ಬಳಿಕ ಹೈದರಾಬಾದ್ ನ ಭಾರತ್ ಬಯೋಟೆಕ್ ಕಂಪನಿಗೆ ಭೇಟಿ ನೀಡಲಿರುವ ಅವರು ನಂತರ ಪುಣೆಯಲ್ಲಿರುವ ಸೇರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಕಂಪನಿಗೆ ಭೇಟಿ ನೀಡಲಿದ್ದಾರೆ. ಕೊರೋನಾ ಲಸಿಕೆ ಉತ್ಪಾದನೆ, ಅಭಿವೃದ್ಧಿ ಬಗ್ಗೆ ಪರಿಶೀಲನೆ ನಡೆಸಲಿದ್ದಾರೆ.

TRENDING