Sunday, January 17, 2021
Home ಅಂತರ್ ರಾಷ್ಟ್ರೀಯ ಕದನ ವಿರಾಮ ಉಲ್ಲಂಘನೆ: ಪಾಕ್ ನ ದಾಳಿಗೆ ಸೇನಾಧಿಕಾರಿ ಸಾವು

ಇದೀಗ ಬಂದ ಸುದ್ದಿ

ಕದನ ವಿರಾಮ ಉಲ್ಲಂಘನೆ: ಪಾಕ್ ನ ದಾಳಿಗೆ ಸೇನಾಧಿಕಾರಿ ಸಾವು

 ಜಮ್ಮು: ಜಮ್ಮು ಮತ್ತು ಕಾಶ್ಮೀರದ ಪೂಂಚ್‌ ಜಿಲ್ಲೆಯ ಹಳ್ಳಿಗಳ ಸಮೀಪದ ಗಡಿ ನಿಯಂತ್ರಣ ರೇಖೆಯಲ್ಲಿ(ಎಲ್‌ಒಸಿ) ಕದನ ವಿರಾಮ ಉಲ್ಲಂಘಿಸಿ, ಪಾಕಿಸ್ತಾನದ ಸೇನೆಯು ನಡೆಸಿದ ಶೆಲ್‌ ಹಾಗೂ ಗುಂಡಿನ ದಾಳಿಯಲ್ಲಿ ಸೇನೆಯ ಜೆಸಿಒ(ಜ್ಯೂನಿಯರ್‌ ಕಮಿಷನ್ಡ್‌ ಆಫಿಸರ್‌) ಹುತಾತ್ಮರಾಗಿದ್ದು, ನಾಗರಿಕರೊಬ್ಬರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಿಲ್ಲೆಯ ಕಸ್ಬಾ ಹಾಗೂ ಕಿರ್ಣಿ ವಲಯದಲ್ಲಿ ಈ ಅಪ್ರಚೋದಿತ ದಾಳಿಯನ್ನು ಪಾಕಿಸ್ತಾನ ಸೇನೆಯು ನಡೆಸಿದ್ದು, ಮಧ್ಯಾಹ್ನ 1.30ರ ವೇಳೆಗೆ ನಡೆಸಿದ ಗುಂಡಿನ ದಾಳಿಯಲ್ಲಿ ಜೆಸಿಒ ಗಾಯಗೊಂಡಿದ್ದರು. ಅವರನ್ನು ಸೇನಾ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆಗೆ ಸ್ಪಂದಿಸದೆ ಅವರು ಮೃತಪಟ್ಟರು ಎಂದು ಅಧಿಕಾರಿಗಳು ತಿಳಿಸಿದರು.

ಮೊಹಮ್ಮದ್‌ ರಶೀದ್‌ ಎಂಬುವವರನ್ನು ಚಿಕಿತ್ಸೆಗಾಗಿ ಜಮ್ಮುವಿನ ಜಿಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

TRENDING