Friday, January 15, 2021
Home ದೆಹಲಿ ನೌಕಾಪಡೆಯ ಮಿಗ್ 29 ತರಬೇತಿ ವಿಮಾನ ಪತನ : ಒಬ್ಬ ಪೈಲಟ್ ರಕ್ಷಣೆ, ಮತ್ತೊಬ್ಬ...

ಇದೀಗ ಬಂದ ಸುದ್ದಿ

ನೌಕಾಪಡೆಯ ಮಿಗ್ 29 ತರಬೇತಿ ವಿಮಾನ ಪತನ : ಒಬ್ಬ ಪೈಲಟ್ ರಕ್ಷಣೆ, ಮತ್ತೊಬ್ಬ ನಾಪತ್ತೆ

ನವದೆಹಲಿ.ನ.27 : ಭಾರತೀಯ ನೌಕಾ ಪಡೆಯ ಮಿಗ್ 29 ಕೆಯುಬಿ ತರಬೇತಿ ಯುದ್ಧ ವಿಮಾನ ಪತನವಾಗಿದ್ದು, ಘಟನೆಯಲ್ಲಿ ಪೈಲಟ್ ಒಬ್ಬನನ್ನು ರಕ್ಷಿಸಲಾಗಿದ್ದು, ಮತ್ತೊಬ್ಬ ಪೈಲಟ್ ನಾಪತ್ತೆಯಾಗಿದ್ದಾರೆ.

ಗೋವಾ ಬಂದರಿವನಲ್ಲಿರುವ ಐಎನ್‌ಎಸ್ ವಿಕ್ರಾಮಾಧಿತ್ಯ ನೌಕೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಮಿಗ್ 29 ಕೆಯುಬಿ ತರಬೇತಿ ಯುದ್ಧ ವಿಮಾನ ನಿನ್ನೆ ಸಂಜೆ ಅರೇಬಿಯನ್ ಸುಮುದ್ರದಲ್ಲಿ ಪತನವಾಗಿದ್ದು, ಘಟನೆಯಲ್ಲಿ ಪೈಲಟ್ ನನ್ನು ಏರ್ ಲಿಫ್ಟ್ ಮೂಲಕ ರಕ್ಷಣೆ ಮಾಡಲಾಗಿದೆ. ಮತ್ತೊಬ್ಬ ಪೈಲಟ್ ನಾಪತ್ತೆಯಾಗಿದ್ದು, ನಾಪತ್ತೆಯಾಗಿರುವ ಪೈಲಟ್ ಗಾಗಿ ಕಾರ್ಯಾಚರಣೆ ಭರದಿಂದ ಸಾಗಿದೆ. ಅಂತೆಯೇ ವಿಮಾನ ಪತನಕ್ಕೆ ಕಾರಣ ತಿಳಿಯಲು ತನಿಖೆಗೆ ಆದೇಶಿಸಲಾಗಿದೆ.

ಪ್ರಸ್ತುತ ಭಾರತೀಯ ನೌಕಾಪಡೆಯಲ್ಲಿ 40ಕ್ಕೂ ಹೆಚ್ಚು ಮಿಗ್ 29 ಕೆ ಸರಣಿಯ ಫೈಟರ್ ಜೆಟ್ ಗಳು ಕಾರ್ಯ ನಿರ್ವಹಿಸುತ್ತಿವೆ.

TRENDING