Sunday, January 17, 2021
Home ಬೆಂಗಳೂರು ಜನ್ ಧನ್ ಖಾತೆ ಹೊಂದಿದವರಿಗೆ ಕೇಂದ್ರದಿಂದ ಮತ್ತೊಂದು ಸಿಹಿಸುದ್ದಿ

ಇದೀಗ ಬಂದ ಸುದ್ದಿ

ಜನ್ ಧನ್ ಖಾತೆ ಹೊಂದಿದವರಿಗೆ ಕೇಂದ್ರದಿಂದ ಮತ್ತೊಂದು ಸಿಹಿಸುದ್ದಿ

 ಬೆಂಗಳೂರು: ಕೊರೋನಾ ನಿಯಂತ್ರಣಕ್ಕಾಗಿ ಲಾಕ್ಡೌನ್ ಜಾರಿ ಮಾಡಿದ ಸಂದರ್ಭದಲ್ಲಿ ಸಂಕಷ್ಟದಲ್ಲಿದ್ದ ಬಡವರ ಖಾತೆಗಳಿಗೆ ಮೂರು ತಿಂಗಳ ಹಣ ಬಿಡುಗಡೆ ಮಾಡಲಾಗಿದೆ.

ರಾಜ್ಯದ ಸುಮಾರು 80 ಲಕ್ಷ ಜನ್ ಧನ್ ಖಾತೆದಾರರಿಗೆ ಪ್ರತಿತಿಂಗಳು 500 ರೂಪಾಯಿಯಂತೆ 1500 ರೂ. ಬಿಡುಗಡೆ ಮಾಡಲಾಗಿದೆ. ಕಲಬುರ್ಗಿಯ ಆರ್.ಟಿ.ಐ. ಕಾರ್ಯಕರ್ತ ಭೀಮನಗೌಡ ಪರಗೊಂಡ ಅವರು ಮಾಹಿತಿ ಹಕ್ಕು ಕಾಯ್ದೆಯಡಿ ಈ ಕುರಿತಾಗಿ ಮಾಹಿತಿ ಕೇಳಿದ್ದು, ಕೇಂದ್ರ ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಮಾಹಿತಿ ನೀಡಲಾಗಿದೆ.

ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿ ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಮೂರು ತಿಂಗಳ ಹಣ ಬಿಡುಗಡೆ ಮಾಡಲಾಗಿದೆ. ಅದೇ ರೀತಿ ರಾಜ್ಯದ 80,64,352 ಜನ್ ಧನ್ ಖಾತೆದಾರರಿಗೆ ನೋವು 1174.15 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ. ಜನ್ ಧನ್ ಖಾತೆ ಹೊಂದಿದ ಮಹಿಳೆಯರಿಗೆ ಏಪ್ರಿಲ್, ಮೇ, ಜೂನ್ ತಿಂಗಳ ತಲಾ 500 ರೂಪಾಯಿಯಂತೆ 1500 ರೂ. ಜಮಾ ಮಾಡಲಾಗುವುದು ಎಂದು ಹೇಳಲಾಗಿತ್ತು.

TRENDING