Friday, January 15, 2021
Home ಜಿಲ್ಲೆ ಧಾರವಾಡ ಧಾರವಾಡ ಡಿವೈಎಸ್ಪಿ ರವಿ ನಾಯಕ ಶಿರಸಿಗೆ ವರ್ಗಾವಣೆ

ಇದೀಗ ಬಂದ ಸುದ್ದಿ

ಧಾರವಾಡ ಡಿವೈಎಸ್ಪಿ ರವಿ ನಾಯಕ ಶಿರಸಿಗೆ ವರ್ಗಾವಣೆ

ಧಾರವಾಡ : ಕಳೆದ ಹಲವು ತಿಂಗಳಿಂದ ಧಾರವಾಡ ಡಿವೈಎಸ್ಪಿ ವರ್ಗಾವಣೆ ಸುದ್ದಿ ಹರಿದಾಡುತ್ತಿತ್ತು. ಇದೀಗ ಕೊನೆಗೂ  ಧಾರವಾಡ ಡಿವೈಎಸ್ಪಿ ರವಿ ನಾಯಕ ಶಿರಸಿಗೆ ವರ್ಗಾವಣೆಗೊಂಡಿದ್ದಾರೆ. ನೂತನ ಡಿವೈಎಸ್ಪಿಯಾಗಿ ಈ ಹಿಂದೆ ಇಂಡಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸುಂಕದ ಮಡಿವಾಳಪ್ಪ ನಿಯೋಜನೆಗೊಂಡಿದ್ದಾರೆ.

ಧಾರವಾಡ ಜಿಲ್ಲೆಯ ಶಾಸಕರೊಬ್ಬರು ಹಲವು ತಿಂಗಳ ಹಿಂದೆಯೇ ಅವರಿಗೆ ಶಿಫಾರಸ್ಸು ಪತ್ರ ನೀಡಿದ್ದು ಭಾರೀ ಚರ್ಚೆಗೆ ಗ್ರಾಸವಾಗಿತ್ತು.

ರವಿ ನಾಯ್ಕ ಅವರನ್ನು ಉಳಿಸಿಕೊಳ್ಳಲು ಹಲವರು ಯತ್ನಿಸಿದರೂ ಕೊನೆ ಗಳಿಗೆಯಲ್ಲಿ ರವಿ ನಾಯ್ಕ ಅವರು ಮನಸ್ಸು ಮಾಡಲಿಲ್ಲ ಎನ್ನಲಾಗಿದೆ. ಹೀಗಾಗಿ ಧಾರವಾಡ ಡಿವೈಎಸ್ಪಿ ರವಿ ನಾಯ್ಕ ಅವರು ಕೋನೆಗೂ ಶಿರಸಿ ಉಪವಿಭಾಗಕ್ಕೆ ವರ್ಗಾವಣೆ ಗೊಂಡಿದ್ದಾರೆ.  ಅವರು ತಮ್ಮ ದಕ್ಷ, ಪ್ರಾಮಾಣಿಕ ಸೇವೆಯಿಂದ ಧಾರವಾಡ ಜಿಲ್ಲೆಯ ಪೊಲೀಸರು ಹಾಗೂ ಸಾರ್ವಜನಿಕರ ಗಮನ ಸೆಳೆದಿದ್ದರು. ಇದೇ ವೇಳೆ ರಾಜ್ಯದ ಹಲವಾರು ಡಿವೈಎಸ್ಪಿ ಗಳನ್ನು ವರ್ಗಾವಣೆ ಮಾಡಲಾಗಿದ್ದು,  ಅವರ ಸ್ಥಳ ನಿಯೋಜನೆ ಪಟ್ಟಿ ಈ ರೀತಿ ಇದೆ.

ದಿ ನ್ಯೂಸ್ ೨೪ ಕನ್ನಡ

ಧಾರವಾಡ

TRENDING