Sunday, January 17, 2021
Home ಅಂತರ್ ರಾಜ್ಯ ಸ್ಟೀಮರ್​ ಬೋಟ್​ನಿಂದ 8 ಟ್ರಕ್ ನದಿ ಪಾಲು

ಇದೀಗ ಬಂದ ಸುದ್ದಿ

ಸ್ಟೀಮರ್​ ಬೋಟ್​ನಿಂದ 8 ಟ್ರಕ್ ನದಿ ಪಾಲು

ಕೋಲ್ಕತ: ಸೋಮವಾರ ದೊಡ್ಡ ಸ್ಟೀಮರ್​ ಬೋಟ್​ನಿಂದ ಆಕಸ್ಮಿಕವಾಗಿ ನದಿ ಪಾಲಾಗಿದ್ದ ಕಾರ್ಮಿಕರು ಮತ್ತು 8 ಟ್ರಕ್​ಗಳಲ್ಲಿ ಈವರೆಗೆ ಎರಡು 3 ಟ್ರಕ್​ ಅನ್ನು ಹೊರತೆಗೆಯಲಾಗಿದ್ದು, ಕಾರ್ಮಿಕನೊಬ್ಬನ ಮೃತದೇಹ ಪತ್ತೆಯಾಗಿದೆ.

ಪಶ್ಚಿಮ ಬಂಗಾಳದ ಮಾಲ್ಡಾದ ಮಾಣಿಕಚಾಕ್​ನ ಗಂಗಾ ನದಿಯಿಂದ ಟ್ರಕ್​ಗಳನ್ನು ಹೊರತೆಗೆಯಲಾಗಿದೆ. ಜಾರ್ಖಂಡ್​ನಿಂದ ನದಿ ಮಾರ್ಗದ ಮೂಲಕ ಬರುವಾಗ ಆಕಸ್ಮಿಕವಾಗಿ ಸ್ಟೀಮರ್​ನಿಂದ ಟ್ರಕ್​ಗಳು ನದಿಯ ಪಾಲಾಗಿದ್ದವು. ಘಟನೆ ಸೋಮವಾರ ನಡೆದಿತ್ತು.

ಮಂಗಳವಾರದವರೆಗೆ ಕೇವಲ ಒಂದೇ ಟ್ರಕ್​ ಪತ್ತೆ ಮಾಡಿದ್ದರಿಂದ ಪತ್ತೆ ಕಾರ್ಯ ಮತ್ತು ರಕ್ಷಣಾ ಕಾರ್ಯಕ್ಕೆ ಚುರುಕು ಮುಟ್ಟಿಸಲು ಫರಾಕ್ಕಾ ಬ್ಯಾರೇಜ್​ನಿಂದ ಹೈಡ್ರಾಲಿಕ್​ ಕ್ರೇನ್​ ತರಿಸಲಾಗಿದ್ದು, ಬುಧವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ನದಿಯಿಂದ 2ನೇ ಮತ್ತು ಸಂಜೆ 6 ಗಂಟೆಗೆ ಮೂರನೇ ಟ್ರಕ್​ ಹೊರ ತೆಗೆಯಲಾಗಿದೆ.

ಸೈದುಲ್​ ಹಖ್​ (20) ಎಂಬ ಕಾರ್ಮಿಕನ ಮೃತದೇಹ ಟ್ರಕ್​ನ ಕ್ಯಾಬಿನ್​ನಲ್ಲಿ ಪತ್ತೆಯಾಗಿದೆ. ಶೋಧ ಕಾರ್ಯ ಮುಂದುವರಿದಿದ್ದು, ಇನ್ನು ಐದು ಟ್ರಕ್​ಗಳ ಮೇಲೆತ್ತುವಿಕೆ ಕಾರ್ಯ ನಡೆಯುತ್ತಿದೆ. 

TRENDING