Wednesday, January 27, 2021
Home ಜಿಲ್ಲೆ ಮೈಸೂರು ಮೈಸೂರು ವಿವಿಯಲ್ಲಿ ದಿವಂಗತ ಖ್ಯಾತ ಹಿನ್ನಲೆ ಗಾಯಕ ಎಸ್.ಪಿ.ಬಿ ಹೆಸರಿನಲ್ಲಿ ಸಂಗೀತ ಪೀಠ ಸ್ಥಾಪನೆ

ಇದೀಗ ಬಂದ ಸುದ್ದಿ

ಮೈಸೂರು ವಿವಿಯಲ್ಲಿ ದಿವಂಗತ ಖ್ಯಾತ ಹಿನ್ನಲೆ ಗಾಯಕ ಎಸ್.ಪಿ.ಬಿ ಹೆಸರಿನಲ್ಲಿ ಸಂಗೀತ ಪೀಠ ಸ್ಥಾಪನೆ

ಮೈಸೂರು, ನ,.26  : ದಿವಂಗತ ಖ್ಯಾತ ಹಿನ್ನಲೆ ಗಾಯಕ ಎಸ್.ಪಿ. ಬಾಲಸುಬ್ರಮಣ್ಯಂ ಅವರ ಹೆಸರಲ್ಲಿ ಸಂಗೀತ ಪೀಠ ಸ್ಥಾಪನೆಗೆ ಮೈಸೂರು ವಿಶ್ವವಿದ್ಯಾನಿಲಯ ನಿರ್ಧರಿಸಿದೆ. ಈ ಹಿನ್ನಲೆಯಲ್ಲಿ ಸಂಗೀತ ಪೀಠ ಸ್ಥಾಪನೆಗೆ ವಿಶ್ವವಿದ್ಯಾನಿಲಯ ಸಿಂಡಿಕೇಟ್ ಅನುಮೋದನೆ ನೀಡಿದೆ.


ವಿಶ್ವವಿದ್ಯಾನಿಲಯದ ಲಲಿತಕಲಾ ಕಾಲೇಜಿನಲ್ಲಿ ಎಸ್.ಪಿ. ಬಾಲಸುಬ್ರಮಣ್ಯಂ ಅವರ ಹೆಸರಿನ ಸಂಗೀತ ಪೀಠ ಪ್ರಾರಂಭವಾಗಲಿದ್ದು ಇದಕ್ಕಾಗಿ ವಾರ್ಷಿಕ ಐದು ಲಕ್ಷ ಮೀಸಲು ಇರಿಸಲಾಗುತ್ತದೆ.

ಈ ಹಣದಲ್ಲಿ ವುಶೇಷ ಉಪನ್ಯಾಸ, ಕಾರ್ಯಾಗಾರ, ಪ್ರಾತ್ಯಕ್ಷಿಕೆ. ಗ್ರಂಥ ಪ್ರಕಟಣೆ ಸೇರಿ ವಿವಿಧ ಶೈಕ್ಷಣಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ವಿವಿ ಪ್ರಕಟಣೆ ಹೇಳಿದೆ.

TRENDING