Wednesday, January 27, 2021
Home ಅಂತರ್ ರಾಷ್ಟ್ರೀಯ ಟ್ರಕ್​-ಬಸ್​ ನಡುವೆ ಭೀಕರ ಅಪಘಾತ: 37 ಮಂದಿ ಸಾವು

ಇದೀಗ ಬಂದ ಸುದ್ದಿ

ಟ್ರಕ್​-ಬಸ್​ ನಡುವೆ ಭೀಕರ ಅಪಘಾತ: 37 ಮಂದಿ ಸಾವು

 ಬ್ರಾಸಿಲಿಯಾ: ಹೆದ್ದಾರಿಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಸುಮಾರು 37 ಮಂದಿ ದಾರುಣವಾಗಿ ಸಾವಿಗೀಡಾಗಿರುವ ಘಟನೆ ಬ್ರೆಜಿಲ್​ನಲ್ಲಿ ಬುಧವಾರ ನಡೆದಿದ್ದು, ಮೃತ ದೇಹಗಳು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿವೆ.

ಬ್ರಜಿಲ್​ನ ಸಾವೋಪೋಲೋ ರಾಜ್ಯದ ಹೆದ್ದಾರಿಯಲ್ಲಿ ಅವಘಡ ಸಂಭವಿಸಿದೆ. ಜವಳಿ ಕಾರ್ಖಾನೆಗೆ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಬಸ್​ ಹಾಗೂ ಟ್ರಕ್​ ನಡುವೆ ಮುಖಾಮುಖಿ ಡಿಕ್ಕಿಯಾಗಿ ದುರಂತ ನಡೆದಿದ್ದು, 37 ಮಂದಿ ಮೃತಪಟ್ಟರೆ, 15 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಅವಶೇಷಗಳಡಿ ಸಿಲುಕಿದ್ದ ಗಾಯಾಳುಗಳನ್ನು ರಕ್ಷಿಸಿ ಆಸ್ಪತ್ರೆಗೆ ರವಾನಿಸಲಾಗಿದ್ದು, ನುಜ್ಜುಗುಜ್ಜಾಗಿರು ವಾಹನಗಳ ಮಧ್ಯೆ ಸಿಲುಕಿದ್ದ ಮೃತದೇಹಗಳನ್ನು ಹೊರತೆಗೆಯಲು ರಕ್ಷಕರು ಹರಸಾಹಸಪಡಬೇಕಾಯಿತು. ಘಟನೆಗೆ ಕಾರಣ ಏನೆಂಬುದು ತಿಳಿದುಬಂದಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಆರಂಭದಲ್ಲಿ 32 ಮಂದಿ ಮೃತಪಟ್ಟಿರುವುದಾಗಿ ವರದಿಯಾಗಿತ್ತು. ಕೆಲವೇ ಸಮಯದಲ್ಲಿ ಮೃತರ ಸಂಖ್ಯೆ 37ಕ್ಕೇರಿದೆ. ಕೆಲ ಮೃತದೇಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಕೆಲವು ದೇಹಗಳು ಅವಶೇಷಗಳಡಿ ಸಿಲುಕಿರುವುದರಿಂದ ಟ್ರಕ್​ನಲ್ಲಿ ಮತ್ತು ಬಸ್ಸಿನಲ್ಲಿ ಎಷ್ಟು ಮಂದಿ ಇದ್ದರು ಎಂಬುದು ಸ್ಪಷ್ಟವಾಗಿಲ್ಲ. ಆದರೆ, ಸ್ಥಳೀಯ ಮಾಧ್ಯಮ ವರದಿಯ ಪ್ರಕಾರ ಬಸ್ಸಿನಲ್ಲಿ 53 ಮಂದಿ ಇದ್ದರು ಎನ್ನಲಾಗಿದೆ. ಇನ್ನು ಟ್ರಕ್​ ಚಾಲಕ ಅಪಘಾತದಿಂದ ಪಾರಾಗಿದ್ದಾನೆ.

ಬ್ರೆಜಿಲ್​ನ ಅತ್ಯಂತ ದೊಡ್ಡ ನಗರ ಮತ್ತು ವಾಣಿಜ್ಯ ನಗರಿ ಪಶ್ಚಿಮ ಸಾವಪೋಲೋದಿಂದ ಸುಮಾರು 210 ಮೈಲಿ ದೂರದಲ್ಲಿರುವ ತಗುಯಿ ಪಟ್ಟಣದ ಹೊರವಲಯದಲ್ಲಿ ಭೀಕರ ಅಪಘಾತ ಸಂಭವಿಸಿದೆ.

TRENDING