Friday, January 15, 2021
Home ಅಂತರ್ ರಾಷ್ಟ್ರೀಯ ಅಫ್ಘಾನಿಸ್ತಾನದ ಬಮಿಯಾನ್‌ನಲ್ಲಿ ಅವಳಿ ಸ್ಫೋಟ: 14 ಮಂದಿ ಸಾವು

ಇದೀಗ ಬಂದ ಸುದ್ದಿ

ಅಫ್ಘಾನಿಸ್ತಾನದ ಬಮಿಯಾನ್‌ನಲ್ಲಿ ಅವಳಿ ಸ್ಫೋಟ: 14 ಮಂದಿ ಸಾವು

ಕಾಬೂಲ್‌: ಮಧ್ಯ ಅಫ್ಘಾನಿಸ್ತಾನದ ಬಮಿಯಾನ್‌ ಪ್ರಾಂತ್ಯದಲ್ಲಿ ನಡೆದ ಅವಳಿ ಸ್ಫೋಟಗಳಲ್ಲಿ ಕನಿಷ್ಠ 14 ಜನರು ಸಾವನ್ನಪ್ಪಿದ್ದಾರೆ ಮತ್ತು 45 ಮಂದಿ ಗಾಯಗೊಂಡಿದ್ದಾರೆ ಎಂದು ಪ್ರಾಂತೀಯ ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.

ಘಟನೆ ಹಿನ್ನೆಲೆಯಲ್ಲಿ ಅಂತರರಾಷ್ಟ್ರೀಯ ಸಮುದಾಯವು ಜಿನಿವಾದಲ್ಲಿ ಅಫ್ಘಾನಿಸ್ತಾನಕ್ಕೆ ನೆರವಿನ ಭರವಸೆ ನೀಡಿದೆ.

‘ರಸ್ತೆ ಬದಿಯಲ್ಲಿ ಸ್ಫೋಟಕಗಳನ್ನು ಬಚ್ಚಿಡಲಾಗಿತ್ತು. ಅವುಗಳ ಸ್ಫೋಟದಿಂದಾಗಿ 12 ನಾಗರಿಕರು, ಇಬ್ಬರು ಟ್ರಾಫಿಕ್‌ ಪೊಲೀಸರು ಸಾವಿಗೀಡಾಗಿದ್ದಾರೆ. 45 ಮಂದಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ,’ ಎಂದು ಸ್ಥಳೀಯ ಪೊಲೀಸ್‌ ವರಿಷ್ಠಾಧಿಕಾರಿ ಜಬರ್ದಸ್ತ್‌ ಸಫಾಯಿ ತಿಳಿಸಿದ್ದಾರೆ.

TRENDING