ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಬಹುನಿಕ್ಷೆಯ ಪೊಗರು ಸಿನಿಮದ ಚಿತ್ರೀಕರಣ ಇತ್ತೀಚಿಗಷ್ಟೆ ಮುಕ್ತಾಯವಾಗಿದೆ. ಇದೀಗ ಪಗರು ಪೋಸ್ಟ್ ಪ್ರಡಕ್ಷನ್ ಕೆಲಸದಲ್ಲಿ ಸಿನಿಮಾತಂಡ ನಿರತವಾಗಿದೆ. ಭಾರಿ ಕುತೂಹಲ ಮತ್ತು ನಿರೀಕ್ಷೆ ಮೂಡಿಸಿರುವ ಪೊಗರು ಸಿನಿಮಾ ಯಾವಾಗ ರಿಲೀಸ್ ಆಗುತ್ತೆ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
ಇದೀಗ ಸಿನಿಮಾತಂಡದ ಕಡೆಯಿಂದ ರಿಲೀಸ್ ಬಗ್ಗೆ ಅಪ್ ಡೇಟ್ ಸಿಕ್ಕಿದೆ. ಪೊಗರು ಸಿನಿಮಾ ಡಿಸೆಂಬರ್ 25 ಕ್ರಿಸ್ಮಸ್ ಸಮಯದಲ್ಲಿ ಅಥವಾ ಮುಂದಿನ ವರ್ಷ ಸಂಕ್ರಾಂತಿಗೆ ರಿಲೀಸ್ ಮಾಡಲು ಚಿತ್ರತಂಡ ನಿರ್ಧರಿಸಿದೆಯಂತೆ. ಈ ಬಗ್ಗೆ ನಿರ್ದೇಶಕ ನಂದಕಿಶೋರ್ ಬಹಿರಂಗ ಪಡಿಸಿದ್ದಾರೆ.
ಅಂದುಕೊಂಡಂತೆ ಆಗಿದ್ದರೆ ಸಿನಿಮಾ ಈಗಾಗಲೇ ಚಿತ್ರೀಕರಣ ಮುಗಿಸಿ ರಿಲೀಸ್ ಆಗಬೇಕಿತ್ತು. ಆದರೆ ಕೊರೊನಾ ಹಿನ್ನಲೆ ಚಿತ್ರೀಕರಣ ಈಗ ಮುಕ್ತಾಯವಾಗಿದ್ದು, ರಿಲೀಸ್ ಗೆ ಸಿದ್ಧವಾಗುತ್ತಿದೆ. ಕ್ರಿಸ್ಮಸ್ ಅಥವಾ ಸಂಕ್ರಾಂತಿ ಹಬ್ಬಕ್ಕೆ ರಿಲೀಸ್ ಪ್ಲಾನ್ ಆದರೆ ಕೊರೊನಾ ಬಳಿಕ ಕನ್ನಡದಲ್ಲಿ ದೊಡ್ಡ ಮಟ್ಟಕ್ಕೆ ರಿಲೀಸ್ ಆಗುತ್ತಿರುವ ಸಿನಿಮಾ ಇದಾಗಿರಲಿದೆ.
ಪೊಗರು ಸಿನಿಮಾದಲ್ಲಿ ಧ್ರುವ ಸರ್ಜಾಗೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಸಿನಿಮಾದಿಂದ ಡೈಲಾಗ್ ಟ್ರೈಲರ್ ಮತ್ತು ಒಂದು ಹಾಡು ರಿಲೀಸ್ ಆಗಿದ್ದು ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಇದೀಗ ಸಿನಿಮಾ ಹೇಗಿದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮನೆಮಾಡಿದೆ.