Sunday, January 17, 2021
Home ಬೆಂಗಳೂರು ಡಿಸೆಂಬರ್ 5ರಂದು ಕರ್ನಾಟಕ ಬಂದ್ ಖಚಿತ: ವಾಟಾಳ್ ನಾಗರಾಜ್

ಇದೀಗ ಬಂದ ಸುದ್ದಿ

ಡಿಸೆಂಬರ್ 5ರಂದು ಕರ್ನಾಟಕ ಬಂದ್ ಖಚಿತ: ವಾಟಾಳ್ ನಾಗರಾಜ್

ಬೆಂಗಳೂರು : ಡಿಸೆಂಬರ್ 5 ರಂದು ಕರ್ನಾಟಕ ಬಂದ್ ಮಾಡಿಯೇ ಸಿದ್ದ ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಹೇಳಿದ್ದಾರೆ.

ರಾಜ್ಯ ಸರಕಾರ ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆಯನ್ನು ಮಾಡಲು ಹೊರಟಿದ್ದು ಇದರಿಂದ ರಾಜ್ಯದ ಕನ್ನಡ ಪರ ಸಂಘಟನೆಗಳು ಮರಾಠ ಅಭಿವೃದ್ಧಿ ಪ್ರಾಧಿಕಾರದ ವಿರುದ್ಧ ದನಿ ಎತ್ತಿದ್ದಾರೆ ಕೂಡಲೇ ಸರಕಾರ ತಮ್ಮ ನಿಲುವನ್ನು ಬದಲಿಸಬೇಕೆಂದು ಹೇಳಿದ್ದು, ಇಲ್ಲದಿದ್ದಲ್ಲಿ ಬಂದ್ ಶತಃಸಿದ್ಧ ಎಂದಿದ್ದಾರೆ.

ಕರ್ನಾಟಕ ಬಂದ್ ಕುರಿತು ಸುದ್ದಿಗೋಷ್ಠಿ ನಡೆಸಿದ ವಾಟಾಳ್ ನಾಗರಾಜ್ ಯಾವುದೇ ಕಾರಣಕ್ಕೂ ಡಿಸೆಂಬರ್ 5ರ ಬಂದ್ ಹಿಂಪಡೆಯುವುದಿಲ್ಲ, ಬಂದ್ ಮಾಡಿಯೇ ಸಿದ್ದ ಎಂದಿದ್ದಾರೆ ಸಾಧ್ಯವಾದರೆ ಸರಕಾರ ನಮ್ಮ ಬಂದ್ ತಡೆಯಲಿ ಎಂದು ಹೇಳಿದ್ದಾರೆ.

ಡಿಸೆಂಬರ್ 5 ರ ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಬಂದ್ ನಡೆಸುತ್ತೇವೆ ಎಂದಿದ್ದಾರೆ.

ಕರ್ನಾಟಕ ಬಂದ್ ಗೆ ಓಲಾ ಬೆಂಬಲ
ಡಿಸೆಂಬರ್ 5 ರಂದು ಕನ್ನಡ ಪರ ಸಂಘಟನೆಗಳು ನಡೆಸಲು ಇಚ್ಛಿಸಿರುವ ಬಂದ್ ಗೆ ಓಲಾ ಬೆಂಬಲ ನೀಡಿದ್ದಾರೆ.

TRENDING