Sunday, January 17, 2021
Home ಅಂತರ್ ರಾಷ್ಟ್ರೀಯ ಕೊರೋನಾ ಅಬ್ಬರ : ಅಮೆರಿಕಾದಲ್ಲಿ ಒಂದೇ ದಿನ 2,146 ಮಂದಿ ಸೋಂಕಿನಿಂದ ಸಾವು

ಇದೀಗ ಬಂದ ಸುದ್ದಿ

ಕೊರೋನಾ ಅಬ್ಬರ : ಅಮೆರಿಕಾದಲ್ಲಿ ಒಂದೇ ದಿನ 2,146 ಮಂದಿ ಸೋಂಕಿನಿಂದ ಸಾವು

ವಾಷಿಂಗ್ಟನ್: ಇಷ್ಟು ದಿನ ಅತೀ ಹೆಚ್ಚು ಸೋಂಕಿನಿಂದ ದಾಖಲೆ ಬರೆಯುತ್ತಿದ್ದ ಅಮೆರಿಕಾ ಇದೀಗ ಸಾವಿನಲ್ಲೂ ದಾಖಲೆ ಬರೆದಿದೆ. 6 ತಿಂಗಳ ಬಳಿಕ ಇದೇ ಮೊದಲ ಬಾರಿಗೆ ಅಮೆರಿಕಾದಲ್ಲಿ ಒಂದೇ ದಿನ ಬರೋಬ್ಬರಿ 2,146 ಮಂದಿ ಸೋಂಕಿನಿಂದ ಸಾವನ್ನಪ್ಪಿರುವುದು ವರದಿಯಾಗಿದೆ.

ಮಂಗಳವಾರ ಒಂದೇ ದಿನ ಅಮೆರಿಕಾದಲ್ಲಿ 2,146 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದು, ಇದರೊಂದಿಗೆ ಸಾವಿನ ಸಖ್ಯೆ 2,59,925ಕ್ಕೆ ಏರಿಕೆಯಾಗಿದೆ.

ದೈನಂದಿನ ಸಾವಿನ ಸಂಖ್ಯೆ 2 ಸಾವಿರಕ್ಕಿಂತಲೂ ಹೆಚ್ಚು ದಾಖಲಾಗಿರುವುದು ಇದು 21ನೇ ಬಾರಿಯಾಗಿದೆ. ಇನ್ನು ಅಮೆರಿಕಾದಲ್ಲಿ ನಿನ್ನೆ ಒಂದೇ ದಿನ 172,935 ಮಂದಿಯಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 12,591,163ಕ್ಕೆ ತಲುಪಿದೆ ಎಂದು ಜಾನ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ ವರದಿಯಲ್ಲಿ ತಿಳಿಸಿದೆ.

TRENDING