Saturday, January 16, 2021
Home ಅಂತರ್ ರಾಷ್ಟ್ರೀಯ ಪ್ರಖ್ಯಾತ ಟಿ20 ಲೀಗ್ ಗೆ ಗುಡ್ ಬೈ ಹೇಳಿದ ಆಸ್ಟ್ರೇಲಿಯಾದ ದಿಗ್ಗಜ ಡೇವಿಡ್ ವಾರ್ನರ್!

ಇದೀಗ ಬಂದ ಸುದ್ದಿ

ಪ್ರಖ್ಯಾತ ಟಿ20 ಲೀಗ್ ಗೆ ಗುಡ್ ಬೈ ಹೇಳಿದ ಆಸ್ಟ್ರೇಲಿಯಾದ ದಿಗ್ಗಜ ಡೇವಿಡ್ ವಾರ್ನರ್!

 ನವದೆಹಲಿ: ಮಹಾಮಾರಿ ಕರೊನಾ ವೈರಸ್​ ಸಂಕಷ್ಟದ ನಡುವೆಯೇ ಆಸ್ಟ್ರೇಲಿಯಾದ ದಿಗ್ಗಜ ಆಟಗಾರ ಡೇವಿಡ್​ ವಾರ್ನರ್​ ಬಹುದೊಡ್ಡ ನಿರ್ಧಾರವನ್ನು ತೆಗೆದುಕೊಂಡಿದ್ದು, ಪ್ರಸಿದ್ಧ ಟಿ20 ಲೀಗ್​ನಿಂದ ಹೊರಗುಳಿಯುವುದಾಗಿ ಹೇಳಿದ್ದಾರೆ.

ಹೌದು, ಐಪಿಎಲ್​ನಲ್ಲಿ ಮಿಂಚು ಹರಿಸಿರುವ ವಾರ್ನರ್​ ಒಂದು ನಿರ್ಧಾರಕ್ಕೆ ಬಂದಿದ್ದು, ಅಂತಾರಾಷ್ಟ್ರೀಯ ವೃತ್ತಿಜೀವನದ ಸಮಯದಲ್ಲಿ ಬಿಗ್​ ಬ್ಯಾಷ್​ ಲೀಗ್​ನಲ್ಲಿ ಪಾಲ್ಗೊಳ್ಳದಿರುವುದಾಗಿ ಹೇಳಿದ್ದಾರೆ. ಬಿಗ್​ ಬ್ಯಾಷ್​ ಲೀಗ್​ ಆಸ್ಟ್ರೇಲಿಯಾದ ಅತಿ ದೊಡ್ಡ ಟಿ20 ಲೀಗ್​ ಆಗಿದ್ದು, ಇದು ಆರಂಭವಾದಾಗ ಡೇವಿಡ್​ ವಾರ್ನರ್​ ಬಿಗ್ಗೆಸ್ಟ್​ ಆಟಗಾರನಾಗಿ ಹೊರ ಹೊಮ್ಮಿದ್ದರು.

ಅಂತಾರಾಷ್ಟ್ರೀಯ ವೃತ್ತಿ ಜೀವನ ಆರಂಭಿಸಿದ ನಂತರ ಕಳೆದ 7 ವರ್ಷಗಳಿಂದ ಲೀಗ್​ನಲ್ಲಿ ವಾರ್ನರ್​ ಭಾಗವಹಿಸಿಲ್ಲ. ಆಸ್ಟ್ರೇಲಿಯಾ ತಂಡಕ್ಕಾಗಿ ಆಡುವಾಗ ಬಿಗ್​ಬ್ಯಾಷ್​ ಲೀಗ್​ನಲ್ಲಿ ಪಾಲ್ಗೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಕೋವಿಡ್​ ಸಮಯದಲ್ಲಿ ಕ್ರಿಕೆಟ್​ ಲೋಕದಲ್ಲಿ ಬದಲಾಗಿರುವ ನಿಯಮಗಳ ಬಗ್ಗೆಯೂ ಮಾತನಾಡಿರುವ ವಾರ್ನರ್​, ಯಾವುದೇ ಆಟಗಾರನು 12 ತಿಂಗಳು ಕ್ವಾರಂಟೈನ್​ ಮತ್ತು ಬಯೋ ಬಬಲ್‌ನಲ್ಲಿ ಉಳಿಯುವುದು ತುಂಬಾ ಕಷ್ಟವೆಂದಿದ್ದಾರೆ.

ಬಯೋ ಬಬಲ್​ ಮುಂದುವರಿಸುವುದು ಸುಲಭವಲ್ಲ. ಹೆಚ್ಚು ಹೊತ್ತು ಬಬಲ್​ ಒಳಗೆ ಉಳಿಯುವುದು ಸವಾಲಿನ ಕೆಲಸ ಎಂದು ವಾರ್ನರ್ ಹೇಳಿದ್ದಾರೆ. ಕ್ವಾರಂಟೈನ್​ ಅವಧಿಯು ಸಹ ತುಂಬಾ ಕಠಿಣ ಎಂದಿದ್ದಾರೆ.

TRENDING