Sunday, May 16, 2021
Homeಬೆಂಗಳೂರುಕಾಲೇಜು ಆರಂಭ : ಬೆಂಗಳೂರಿನಲ್ಲಿ 117 ವಿದ್ಯಾರ್ಥಿಗಳು, 51 ಶಿಕ್ಷಕರಿಗೆ ಕೊರೊನಾ ದೃಢ

ಇದೀಗ ಬಂದ ಸುದ್ದಿ

ಕಾಲೇಜು ಆರಂಭ : ಬೆಂಗಳೂರಿನಲ್ಲಿ 117 ವಿದ್ಯಾರ್ಥಿಗಳು, 51 ಶಿಕ್ಷಕರಿಗೆ ಕೊರೊನಾ ದೃಢ

 ಬೆಂಗಳೂರು : ರಾಜ್ಯದಲ್ಲಿ ಕಾಲೇಜು ಆರಂಭದ ಬೆನ್ನಲ್ಲೇ ಬಿಗ್ ಶಾಕ್ ಎದುರಾಗಿದ್ದು, ಬೆಂಗಳೂರಿನಲ್ಲಿ ಕಾಲೇಜು ಆರಂಭವಾದ 5 ದಿನದಲ್ಲೇ 117 ವಿದ್ಯಾರ್ಥಿಗಳು ಮತ್ತು 51 ಶಿಕ್ಷಕರಿಗೆ ಸೋಂಕು ಕೊರೊನಾ ವೈರಸ್ ಸೋಂಕು ದೃಢಪಟ್ಟಿದೆ.

ಕೋವಿಡ್ ಮುನ್ನೆಚ್ಚರಿಕ ಕ್ರಮದೊಂದಿಗೆ ಪದವಿ, ಸ್ನಾತಕೋತ್ತರ ಪದವಿ, ಎಂಜನಿಯರಿಂಗ್ ಮತ್ತು ಡಿಪ್ಲೋಮಾ ಕಾಲೇಜುಗಳನ್ನು ಆರಂಭಿಸಲಾಗಿದೆ. ಈ ವೇಳೆ ವಿದ್ಯಾರ್ಥಿಗಳಿಗೆ ಕೋವಿಡ್ ಟೆಸ್ಟ್ ಕಡ್ಡಾಯ ಮಾಡಲಾಗಿದ್ದು, ಕೋವಿಡ್ ಟೆಸ್ಟ್ ಮಾಡಿಸಿದ ಬೆಂಗಳೂರಿನ 117 ವಿದ್ಯಾರ್ಥಿಗಳಿಗೆ ಕೊರೊನಾ ವೈರಸ್ ಸೋಂಕು ದೃಢಪಟ್ಟಿದೆ.

ಕಾಲೇಜುಗಳಿಗೆ ಆಗಮಿಸುವ ವಿದ್ಯಾರ್ಥಿಗಳಿಗೆ ಕೋವಿಡ್ ಟೆಸ್ಟ್ ಕಡ್ಡಾಯ ಮಾಡಲಾಗಿದ್ದು, ಈ ವೇಳೆ ಸಾವಿರಾರು ವಿದ್ಯಾರ್ಥಿಗಳಿಗೆ ಕೊರೊನಾ ಟೆಸ್ಟ್ ಮಾಡಲಾಗಿದ್ದು, ಕಳೆದ 5 ದಿನಗಳಲ್ಲಿ ಬೆಂಗಳೂರಿನಲ್ಲಿ 117 ವಿದ್ಯಾರ್ಥಿಗಳಿಗೆ ಮತ್ತು 51 ಶಿಕ್ಷಕರಿಗೆ ಕೊರೊನಾ ವೈರಸ್ ಸೋಂಕು ದೃಢಪಟ್ಟಿದೆ ಎನ್ನಲಾಗಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img