Wednesday, November 25, 2020
Home ಬೆಂಗಳೂರು “ನನ್ನ ಭಾಷೆಯಲ್ಲಿ ಉತ್ತರ ಕೊಡಬೇಕಾಗುತ್ತೆ": ವಾಟಾಳ್ ನಾಗರಾಜ್ ಗೆ ರೇಣುಕಾಚಾರ್ಯ ಖಡಕ್ ವಾರ್ನಿಂಗ್

ಇದೀಗ ಬಂದ ಸುದ್ದಿ

ಕೊರೋನಾ ಅಬ್ಬರ : ಅಮೆರಿಕಾದಲ್ಲಿ ಒಂದೇ ದಿನ...

ವಾಷಿಂಗ್ಟನ್: ಇಷ್ಟು ದಿನ ಅತೀ ಹೆಚ್ಚು ಸೋಂಕಿನಿಂದ ದಾಖಲೆ ಬರೆಯುತ್ತಿದ್ದ ಅಮೆರಿಕಾ ಇದೀಗ ಸಾವಿನಲ್ಲೂ ದಾಖಲೆ ಬರೆದಿದೆ. 6 ತಿಂಗಳ ಬಳಿಕ ಇದೇ ಮೊದಲ ಬಾರಿಗೆ ಅಮೆರಿಕಾದಲ್ಲಿ ಒಂದೇ ದಿನ...

ಉ.ಪ್ರದೇಶದ ವಿಮಾನ ನಿಲ್ದಾಣಕ್ಕೆ ಶ್ರೀರಾಮನ ಹೆಸರಿಟ್ಟ ಸಿಎಂ...

ಲಕ್ನೋ, ನ. 25: ಉತ್ತರ ಪ್ರದೇಶದ ವಿಮಾನ ನಿಲ್ದಾಣದ ಹೆಸರು ಬದಲಾಯಿಸಲು ಯೋಗಿ ಆದಿತ್ಯನಾಥ್ ನಿರ್ಧರಿಸಿದ್ದಾರೆ. ಈ ಕುರಿತಂತೆ ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ.

ಪ್ರಖ್ಯಾತ ಟಿ20 ಲೀಗ್ ಗೆ ಗುಡ್ ಬೈ...

 ನವದೆಹಲಿ: ಮಹಾಮಾರಿ ಕರೊನಾ ವೈರಸ್​ ಸಂಕಷ್ಟದ ನಡುವೆಯೇ ಆಸ್ಟ್ರೇಲಿಯಾದ ದಿಗ್ಗಜ ಆಟಗಾರ ಡೇವಿಡ್​ ವಾರ್ನರ್​ ಬಹುದೊಡ್ಡ ನಿರ್ಧಾರವನ್ನು ತೆಗೆದುಕೊಂಡಿದ್ದು, ಪ್ರಸಿದ್ಧ ಟಿ20 ಲೀಗ್​ನಿಂದ ಹೊರಗುಳಿಯುವುದಾಗಿ ಹೇಳಿದ್ದಾರೆ. ಹೌದು,...

ಪ.ಬಂಗಾಳ ‘ಎರಡನೇ ಕಾಶ್ಮೀರ’ವಾಗಿ ಮಾರ್ಪಟ್ಟಿದೆ: ಬಿಜೆಪಿ ಮುಖ್ಯಸ್ಥ...

 ಕೋಲ್ಕತ್ತ:‍ ಪಶ್ಚಿಮ ಬಂಗಾಳ 'ಎರಡನೇ ಕಾಶ್ಮೀರವಾಗಿ' ಮಾರ್ಪಟ್ಟಿದೆ. ಇಲ್ಲಿ ನಿತ್ಯ ಉಗ್ರರನ್ನು ಬಂಧಿಸಲಾಗುತ್ತಿದೆ. ದಿನಬೆಳಗಾದರೆ ಅಕ್ರಮ ಬಾಂಬ್‌ ತಯಾರಿಕಾ ಕಾರ್ಖಾನೆಗಳು ಪತ್ತೆಯಾಗುತ್ತಿವೆ ಎಂದು ಪಶ್ಚಿಮ ಬಂಗಾಳದ ಬಿಜೆಪಿ ಮುಖ್ಯಸ್ಥ ದಿಲೀಪ್‌ ಘೋಷ್‌...

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ‘ಪೊಗರು’ ಸಿನಿಮಾ...

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಬಹುನಿಕ್ಷೆಯ ಪೊಗರು ಸಿನಿಮದ ಚಿತ್ರೀಕರಣ ಇತ್ತೀಚಿಗಷ್ಟೆ ಮುಕ್ತಾಯವಾಗಿದೆ. ಇದೀಗ ಪಗರು ಪೋಸ್ಟ್ ಪ್ರಡಕ್ಷನ್ ಕೆಲಸದಲ್ಲಿ ಸಿನಿಮಾತಂಡ ನಿರತವಾಗಿದೆ. ಭಾರಿ ಕುತೂಹಲ ಮತ್ತು ನಿರೀಕ್ಷೆ...

“ನನ್ನ ಭಾಷೆಯಲ್ಲಿ ಉತ್ತರ ಕೊಡಬೇಕಾಗುತ್ತೆ”: ವಾಟಾಳ್ ನಾಗರಾಜ್ ಗೆ ರೇಣುಕಾಚಾರ್ಯ ಖಡಕ್ ವಾರ್ನಿಂಗ್

 ಬೆಂಗಳೂರು, ನವೆಂಬರ್ 22 : ” ವಾಟಾಳ್ ನಾಗರಾಜ್ ಒಬ್ಬರೇ ಕನ್ನಡ ಅಭಿಮಾನಿಯಲ್ಲ. ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರ ಬಗ್ಗೆ ಹಗುರವಾಗಿ ಮಾತನಾಡಿದರೆ ನನ್ನ ಭಾಷೆಯಲ್ಲಿ ಉತ್ತರಿಸುತ್ತೇನೆ” ಎಂದು ಹೊನ್ನಾಳಿ ಬಿಜೆಪಿ ಶಾಸಕ ಎಂ. ಪಿ. ರೇಣುಕಾಚಾರ್ಯ ವಾಟಾಳ್ ನಾಗರಾಜ್‌ಗೆ ಎಚ್ಚರಿಕೆ ನೀಡಿದರು.

ಬೆಂಗಳೂರಿನಲ್ಲಿ ಭಾನುವಾರ ಮಾತನಾಡಿದ ರೇಣುಕಾಚಾರ್ಯ, “ಕನ್ನಡ ಪರ ಸಂಘಟನೆಗಳ ಕುರಿತು ಬಸನಗೌಡ ಪಾಟೀಲ್ ಯತ್ನಾಳ್ ನೀಡಿದ ಹೇಳಿಕೆಯನ್ನು ನಾನು ಸಮರ್ಥಿಸಿಕೊಳ್ಳುವೆ. ಅವರು ಸರಿಯಾಗಿ ಹೇಳಿದ್ದಾರೆ” ಎಂದರು.

“ಯಡಿಯೂರಪ್ಪ ಅವರ ವಯಸ್ಸು, ಅವರ ರಾಜಕೀಯ ಅನುಭವ ಏನು?. ಅವರಿಗೆ ವಾಟಾಳ್ ನಾಗರಾಜ್ ನೀತಿ ಪಾಠ ಹೇಳುತ್ತಾರೆ. ನೀವು ಎಷ್ಟು ಸಲ ಜನರಿಂದ ಆಯ್ಕೆಯಾಗಿದ್ದೀರಿ?” ಎಂದು ರೇಣುಕಾಚಾರ್ಯ ಪ್ರಶ್ನಿಸಿದರು.

“ನಿಮಗೆ ಮಾತ್ರ ಕನ್ನಡ ಭಾಷೆನಾ?, ಅಭಿಮಾನವೇ?. ಅಚ್ಚ ಕನ್ನಡಿಗರು ನಾವು. ಹಳ್ಳಿಯಲ್ಲಿ ಹುಟ್ಟಿ ಬೆಳೆದು ಜನರ ನಡುವೆ ಪ್ರತಿನಿತ್ಯ ಕನ್ನಡ ಬಳಕೆ ಮಾಡುತ್ತಿರುವವರು ನಾವು” ಎಂದು ವಾಟಾಳ್ ನಾಗರಾಜ್‌ರನ್ನು ತರಾಟೆಗೆ ತೆಗೆದುಕೊಂಡರು.

“ಮುಖ್ಯಮಂತ್ರಿಗಳ ಬಗ್ಗೆ ಬಳಸುವ ಭಾಷೆ ಬಗ್ಗೆ ನಾಲಿಗೆ ಮೇಲೆ ಹಿಡಿತವಿರಲಿ. ಕನ್ನಡ ಭಾಷೆ ಬಗ್ಗೆ ಯಡಿಯೂರಪ್ಪ ಅವರಿಗೆ ಇರುವ ನೈತಿಕತೆ ಪ್ರಶ್ನೆ ಮಾಡುವ ಹಕ್ಕು ನಿಮಗೆ ಇಲ್ಲ. ಇನ್ನೊಮ್ಮೆ ಮಾತನಾಡಿದರೆ ನಾನು ನನ್ನ ಭಾಷೆಯಲ್ಲಿ, ದಾಟಿಯಲ್ಲಿ ಉತ್ತರ ಕೊಡುವೆ” ಎಂದು ರೇಣುಕಾಚಾರ್ಯ ಹೇಳಿದರು.

ಕನ್ನಡ ಒಕ್ಕೂಟ ಡಿಸೆಂಬರ್ 5ರಂದು ಕರ್ನಾಟಕ ಬಂದ್‌ಗೆ ಕರೆ ನೀಡಿವೆ. ಕರ್ನಾಟಕ ಸರ್ಕಾರ ಮರಾಠಾ ಅಭಿವೃದ್ಧಿ ನಿಗಮ ರಚನೆ ಆದೇಶ ರದ್ದುಗೊಳಿಸಬೇಕು ಎಂದು ಒತ್ತಾಯಿಸಿ ಬಂದ್ ಕರೆ ನೀಡಲಾಗಿದೆ. ಬಂದ್ ಮಾಡದಂತೆ ಯಡಿಯೂರಪ್ಪ ಸೂಚನೆ ಕೊಟ್ಟಿದ್ದಾರೆ.

“ನಾವು ನೀಚ ಕೆಲಸ ಮಾಡೋದಿಲ್ಲ. ನಾವು ಬಂದ್‌ನಿಂದ ಹಿಂದೆ ಸರಿಯುವಂತೆ ಮಾಡುತ್ತಿದ್ದಾರೆ. ಸಿಎಂ ಯಡಿಯೂರಪ್ಪಗೆ ನೀಚ ಬುದ್ಧಿ ಇದೆ” ಎಂದು ವಾಟಾಳ್ ನಾಗರಾಜ್ ಹೇಳಿಕೆ ನೀಡಿದ್ದರು.

TRENDING