Saturday, April 17, 2021
Home ಜಿಲ್ಲೆ ಬೆಳಗಾವಿ ಮುಖ್ಯಮಂತ್ರಿ ಕೊಟ್ಟ ಮಾತಿನಂತೆ ನಡೆದುಕೊಳ್ಳುವ ವಿಶ್ವಾಸವಿದೆ: ಡಾ.ಕೆ. ಸುಧಾಕರ್

ಇದೀಗ ಬಂದ ಸುದ್ದಿ

ಮುಖ್ಯಮಂತ್ರಿ ಕೊಟ್ಟ ಮಾತಿನಂತೆ ನಡೆದುಕೊಳ್ಳುವ ವಿಶ್ವಾಸವಿದೆ: ಡಾ.ಕೆ. ಸುಧಾಕರ್

 ಬೆಳಗಾವಿ: ‘ಕಾಂಗ್ರೆಸ್ ಹಾಗೂ ಜೆಡಿಎಸ್ ತೊರೆದು ಬಂದಿರುವ ನಮ್ಮ ಮಿತ್ರರಿಗೆ ಸಚಿವ ಸ್ಥಾನ ಸಿಗುವ ವಿಶ್ವಾಸವಿದೆ. ಕೊಟ್ಟ ಮಾತಿನಂತೆ ನಡೆದುಕೊಳ್ಳುವೆ ಎಂದು ಸಿ.ಎಂ ಹಲವು ಬಾರಿ ಹೇಳಿದ್ದಾರೆ’ ಎಂದು ಸಚಿವ ಡಾ.ಕೆ.ಸುಧಾಕರ್‌ ತಿಳಿಸಿದರು.

ಇಲ್ಲಿನ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಶನಿವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಮುಖ್ಯಮಂತ್ರಿ ಮತ್ತು ಪಕ್ಷದವರು ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಾರೆ ಎಂಬ ಭರವಸೆ ಇದೆ. ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಅವರಿಗೆ ಸಚಿವ ಸ್ಥಾನ ಸಿಗುವುದಿಲ್ಲ ಎಂಬ ನಿರ್ಧಾರಕ್ಕೆ ಈಗಲೇ ಬರಬೇಕೆ?, ಕಾದು‌ ನೋಡೋಣ’ ಎಂದು ಹೇಳಿದರು.

ಸಚಿವ ರಮೇಶ ಜಾರಕಿಹೊಳಿ ಅವರು ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರನ್ನು ಭೇಟಿ ಆಗಿರುವುದು ಅಪರಾಧವೇ? ಅವರು ದೆಹಲಿಗೆ ಹೋಗುವುದು ಅಪರೂಪ ಏನಲ್ಲ. ಇದರಲ್ಲಿ ರಾಜಕಾರಣವಿಲ್ಲ’ ಎಂದರು.

‘ಬಿ.ಎಲ್‌. ಸಂತೋಷ್ ಅವರು ಪಕ್ಷದ ದೊಡ್ಡ ನಾಯಕರು. ಸಾಮಾನ್ಯ ಕಾರ್ಯಕರ್ತರಿಂದ ಹಿಡಿದು ಸಚಿವರವರೆಗೂ ಅವರನ್ನು ಭೇಟಿ ಆಗಬೇಕು ಎನ್ನುವ ಆಸೆ ಇರುತ್ತದೆ. ಸೌಜನ್ಯದ ಭೇಟಿಗೆ ರಾಜಕೀಯದ ಬಣ್ಣ ಬಳಿಯಬಾರದು’ ಎಂದರು.

TRENDING